ಬುಧವಾರ, ಅಕ್ಟೋಬರ್ 21, 2020
21 °C

ಇಬ್ಬರ ಸಾವು, 209 ಮಂದಿಗೆ ಕೋವಿಡ್‌ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಗುರುವಾರ 209 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 12,812ಕ್ಕೆ ಹೆಚ್ಚಳವಾಗಿದೆ. ಇಬ್ಬರು ಮೃತಪಟ್ಟಿದ್ದು ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆ 117ಕ್ಕೆ ಏರಿಕೆಯಾಗಿದೆ.

ಮದ್ದೂರು ತಾಲ್ಲೂಕಿನ 63 ವರ್ಷದ ಮಹಿಳೆ, ಮಂಡ್ಯ ತಾಲ್ಲೂಕಿನ 78 ವರ್ಷದ ವೃದ್ಧ ಸಾವಿಗೀಡಾಗಿದ್ದಾರೆ. ಮಂಡ್ಯ ತಾಲ್ಲೂಕಿನ 62, ಪಾಂಡವಪುರ 35, ಶ್ರೀರಂಗಪಟ್ಟಣ 29, ಕೆ.ಆರ್‌.ಪೇಟೆ 26, ಮಳವಳ್ಳಿ 22, ಮದ್ದೂರು 19, ನಾಗಮಂಗಲ ತಾಲ್ಲೂಕಿನ 15 ಮಂದಿಗೆ ಗುರುವಾರ ಸೋಂಕು ಪತ್ತೆಯಾಗಿದೆ.

ಒಟ್ಟು ರೋಗಿಗಳಲ್ಲಿ ಗುರುವಾರ ವಿವಿಧ ಕೋವಿಡ್‌ ಕೇರ್‌ ಕೇಂದ್ರಗಳಿಂದ 263 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 10, 950 ಮಂದಿ ಗುಣಮುಖರಾಗಿದ್ದು 1,744 ಪ್ರಕರಣಗಳು ಸಕ್ರಿಯವಾಗಿವೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೂ 1,42,278 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಒಟ್ಟು ರೋಗಿಗಳಲ್ಲಿ 872 ಮಂದಿ ಮನೆಯಲ್ಲೇ ಪ್ರತ್ಯೇವಾಗಿ ಚಿಕಿತ್ಸೆ ಪಡೆಯುತ್ತಿದ್ಧಾರೆ. 251 ಮಂದಿ ವಿವಿಧ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿದ್ದರೆ 138 ಮಂದಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ಧಾರೆ.

ಕೋವಿಡ್‌ ಅಂಕಿ–ಅಂಶ

ಜಿಲ್ಲೆಯಲ್ಲಿ ಒಟ್ಟು: 12,812

ಸಕ್ರಿಯ ಪ್ರಕರಣ: 1,744

ಏರಿಕೆ: 209

ಗುಣಮುಖ: 10,950

ಏರಿಕೆ: 263

ಸಾವು: 117

ಏರಿಕೆ: 02

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು