ಬುಧವಾರ, ಆಗಸ್ಟ್ 10, 2022
24 °C

32 ಮಂದಿಗೆ ಸೋಂಕು, 61 ಜನ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಜಿಲ್ಲೆಯಲ್ಲಿ ಸೋಮವಾರ 32 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 18,395ಕ್ಕೆ ಏರಿಕೆಯಾಗಿದೆ. 61 ಮಂದಿ ಗುಣಮುಖರಾಗಿದ್ದಾರೆ.

ಮಂಡ್ಯ ತಾಲ್ಲೂಕಿನ 17, ಮದ್ದೂರು 3, ಮಳವಳ್ಳಿ 4, ಪಾಂಡವಪುರ 1, ಶ್ರೀರಂಗಪಟ್ಟಣ 4, ಕೆ.ಆರ್‌.ಪೇಟೆ 1, ನಾಗಮಂಗಲ 1, ಹೊರ ಜಿಲ್ಲೆಯ ಒಬ್ಬರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸೋಮವಾರ ಮಂಡ್ಯ ತಾಲ್ಲೂಕಿನ 21, ಮದ್ದೂರು 9, ಮಳವಳ್ಳಿ 4, ಪಾಂಡಪುರ 16, ಶ್ರೀರಂಗಪಟ್ಟಣ 2, ಕೆ.ಆರ್‌.ಪೇಟೆ 1, ನಾಗಮಂಗಲ 6, ಹೊರಜಿಲ್ಲೆಯ ಇಬ್ಬರು ಸೇರಿದಂತೆ 61 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಇಲ್ಲಿಯವರೆಗೆ 17,964 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 284 ಸಕ್ರಿಯ ಪ್ರಕರಣಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.