ಮಂಡ್ಯ: ನಗರದ ಮಿಮ್ಸ್, ತಾಲ್ಲೂಕಿನ ಕೊತ್ತತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 6 ತಾಲ್ಲೂಕಿನ ಆಸ್ಪತ್ರೆಗಳಲ್ಲಿ
ಜ. 16 ರಿಂದ ಕೋವಿಡ್ ಲಸಿಕೆ ‘ಕೋವಿ ಶೀಲ್ಡ್’ ನೀಡಲಾಗುತ್ತಿದೆ.

ಶನಿವಾರ ಜಿಲ್ಲಾಸ್ಪತ್ರೆಯಲ್ಲಿ ಸಫಾಯಿ ಕರ್ಮಚಾರಿ, ಡಿ ಗ್ರೂಪ್ ನೌಕರರು ಹಾಗೂ ಕೊರೊನಾ ಸೋಂಕಿತರೊಂದಿಗೆ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ನೀಡಲಾಗುವುದು. ಕೋವಿಡ್ ವ್ಯಾಕ್ಸಿನೇಷನ್ ವಾರ್ ರೂಮ್ ಮಾಡಲಾಗಿದ್ದು, ಎಲ್ಲಾ ಸೆಂಟರ್ ಮಾಹಿತಿಗಳನ್ನು ಸಂಗ್ರಹಿಸಲಾಗುವುದು. ಪ್ರತಿ ಸೆಂಟರ್‌ನಲ್ಲಿ ಇಬ್ಬರು ವೈದ್ಯರನ್ನು ನಿಗಾ ಇಡಲು ನೇಮಿಸಲಾಗಿದೆ ಎಂದು ಡಿಎಚ್‌ಒ ಡಾ.ಎಚ್.ಪಿ.ಮಂಚೇಗೌಡ ತಿಳಿಸಿದರು.

ಮೊದಲ ಹಂತದಲ್ಲಿ 15,316 ಮಂದಿ ಆನ್‌ಲೈನ್ ನಲ್ಲಿ ನೋಂದಣಿ ಮಾಡಿ ಕೊಂಡಿದ್ದು, ಇದರಲ್ಲಿ 8 ಸಾವಿರ ಲಸಿಕೆ ಬಂದಿದೆ. ಜಿಲ್ಲೆಯ 8 ಕೇಂದ್ರಗಳಲ್ಲಿ ತಲಾ 100 ಮಂದಿಯಂತೆ 800 ಮಂದಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಮವಾರದ ನಂತರ ಜಿಲ್ಲೆಯ 72 ಸೆಂಟರ್‌ನಲ್ಲಿ 150 ಸೆಷನ್‌ನಲ್ಲಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.