ತಿ.ನರಸೀಪುರ ತಾಲ್ಲೂಕಿನ ಹುಣಗನಹಳ್ಳಿ ಹುಂಡಿ ಗ್ರಾಮದ ಫಾರಂ ಹೌಸ್‌ವೊಂದರಲ್ಲಿ ದಾಳಿ ನಡೆಸಿದ ಸಂದರ್ಭ ಪತ್ತೆಯಾದ ಪುಸ್ತಕದಲ್ಲಿ ₹1.50 ಲಕ್ಷ ₹1.90 ಲಕ್ಷ ಎಂದು ಪುಸ್ತಕದಲ್ಲಿ ದಿನಾಂಕವಾರು ನಮೂದಿಸಲಾಗಿತ್ತು. ನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆದಿರುವುದು ಇದರಿಂದ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯಲ್ಲಿ ಪ್ರಕರಣಗಳು ಪತ್ತೆಯಾದ ನಂತರ ಈ ದಂಧೆಯ ಜಾಲ ಅಕ್ಕಪಕ್ಕದ ಜಿಲ್ಲೆಗೆ ಕಾಲಿಟ್ಟು ಅಲ್ಲಿ ಕಾರ್ಯಾಚರಣೆ ಮುಂದುವರಿಸಿವೆ. ನಾಗಮಂಗಲದಲ್ಲಿ ಸಿಕ್ಕಿಬಿದ್ದ ಆರೋಪಿ ಈಗ ಜಾಮೀನಿನ ಮೇಲೆ ಹೊರಬಂದಿದ್ದು ಆತನ ಪಾತ್ರ ಮೈಸೂರಿನ ಪ್ರಕರಣದಲ್ಲೂ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.