ಸೋಮವಾರ, ಜೂನ್ 21, 2021
29 °C

ಅಸ್ಥಿ ವಿಸರ್ಜನೆಗೆ ಅವಕಾಶ: ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ಶ್ರೀರಂಗಪಟ್ಟಣದ ಕಾವೇರಿ ನದಿ ತಟದಲ್ಲಿ ಮೃತರ ಅಸ್ಥಿ ವಿಸರ್ಜನೆಗೆ ಜಿಲ್ಲಾಡಳಿತ ಅವಕಾಶ ನೀಡಬೇಕು’ ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ವಿ.ಭಾನುಪ್ರಕಾಶ್‌ ಶರ್ಮಾ ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬೆಂಗಳೂರು– ಮೈಸೂರು ಸೇರಿದಂತೆ ವಿವಿಧೆಡೆಗಳಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಅಸ್ಥಿಯನ್ನು ಮನೆಯಲ್ಲೇ ಇಟ್ಟುಕೊಂಡಿ ದ್ದು, ವಿಸರ್ಜಿಸಲಾಗದೆ ಮಾನಸಿಕ ತೊಳಲಾಟಕ್ಕೆ ಸಿಲುಕಿದ್ದಾರೆ. ಕೊರೊನಾ ದಿಂದ ಮೃತಪಟ್ಟಿರುವ ನೋವು ಒಂದಡೆ ಯಾದರೆ ಸರಿಯಾದ ಸಮಯಕ್ಕೆ ಅಸ್ಥಿ ಬಿಡಲಿಲ್ಲ ಎಂಬ ಕೊರಗು ಮನೆಯ ವರಲ್ಲಿ ಮನೆ ಮಾಡಿದೆ. ಅಸ್ಥಿ ಬಿಡಲು ನಿಯಮಾನುಸಾರ ಅವಕಾಶ ಕಲ್ಪಿಸಿದರೆ ಮೃತಪಟ್ಟವರ ಕುಟುಂಬಗಳಿಗೆ ಮಾನಸಿಕ ನೆಮ್ಮದಿ ಸಿಗುತ್ತದೆ’ ಎಂದರು.

‘ಅಸ್ಥಿ ಬಿಡುವುದರಿಂದ ನದಿ ಮಲಿನ ವಾಗುತ್ತದೆ ಎಂದು ಆರೋಪಿಸುತ್ತಾರೆ. ಆದರೆ ಸುತ್ತಮುತ್ತಲ ಕಾರ್ಖಾನೆಗಳ ಕೊಳಚೆ ನೀರನ್ನು ನದಿಗೆ ಬಿಡುತ್ತಿದ್ದಾರೆ. ಈಗ ಅದು ಕಡಿಮೆಯಾಗಿದೆ. ಅಸ್ಥಿ ವಿಸರ್ಜನೆಯಿಂದ ನದಿ ಮಲಿನವಾ ಗುವುದಿಲ್ಲ. ಹಿಂದೂಗಳ ಧಾರ್ಮಿಕ ನಂಬಿಕೆಗೆ ಯಾವುದೇ ಅಡೆತಡೆಯಾ ಗದಂತೆ ಅಸ್ಥಿ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಬೇಕು’ ಎಂದರು.

‘ಶ್ರೀರಂಗಪಟ್ಟಣದ ಪಶ್ಚಿಮ ವಾಹಿಸಿ, ಗೋಸಾಯಿ ಘಾಟ್‌, ಗಂಜಾಂನ ಸಂಗಮದಲ್ಲಿ ಹಿಂದಿನಿಂದಲೂ ಧಾರ್ಮಿಕ ವಿಧಿ ವಿಧಾನದೊಂದಿಗೆ ಅಸ್ಥಿ ವಿಸರ್ಜನೆ ಕಾರ್ಯವನ್ನು ಮಾಡಿಕೊಂಡು ಬರಲಾಗುತ್ತಿದೆ. ಮಹಾತ್ಮ ಗಾಂಧಿ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸೇರಿದಂತೆ ಅನೇಕ ಗಣ್ಯರ ಅಸ್ಥಿ ವಿಸರ್ಜಿಸಲಾಗಿದೆ. ಆದರೆ, ಕೊರೊನಾ ಕಾರಣದಿಂದ ಅಸ್ಥಿ ವಿಸರ್ಜಿ ಸುವುದನ್ನು ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದರು.

ನಂತರ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಘಟಕದ ಕಾರ್ಯದರ್ಶಿ ಬಾಲು ಚಿಕ್ಕಬಳ್ಳಿ, ಪದಾಧಿಕಾರಿಗಳಾದ ಪುನೀತ್‌, ಚೇತನ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು