ಶಿಶು ಅಭಿವೃದ್ಧಿ ಅಧಿಕಾರಿ ಅಮಾನತಿಗೆ ಆಗ್ರಹ

ಮದ್ದೂರು: ತಾಲ್ಲೂಕಿನ ಶಿಶುಅಭಿವೃದ್ಧಿ ಅಧಿಕಾರಿ ಚೇತನ್ ಕುಮಾರ್ ಅವರು ರೈತರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತಸಂಘದ (ಮೂಲಸಂಘಟನೆ) ವತಿಯಿಂದ ಪಟ್ಟಣದ ಟಿ.ಬಿ.ಸರ್ಕಲ್ ಬಳಿ ಇರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ, ರೈತ ಸಂಘದ ಕಾರ್ಯಕರ್ತರು ಪ್ರತಿಭಟಿಸಿದರು.
ರೈತಸಂಘದ ಮುಖಂಡರಾದ ಸುನಂದಜಯರಾಮು ಮಾತನಾಡಿ, ಮದ್ದೂರು ತಾಲ್ಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳ ನೇಮಕಾತಿ ವಿಚಾರದಲ್ಲಿ ಸಾದೋಳಲು ಗ್ರಾ.ಪಂ ವ್ಯಾಪ್ತಿಯ ಬೋರಾಪುರ ಅಂಗನವಾಡಿ ಕೇಂದ್ರ 11ರ ಖಾಲಿ ಹುದ್ದೆ ನೇಮಕಾತಿಗೆ ಪ್ರಕಟಣೆ ಮಾಡದಿರುವ ವಿಚಾರ ಮಾತನಾಡಲು ಜಿಲ್ಲಾ ರೈತಸಂಘದ ಅಧ್ಯಕ್ಷ (ಮೂಲಸಂಘಟನೆ) ಬೋರಾಪುರ ಶಂಕರೇಗೌಡ ಚೇತನ್‌ಕುಮಾರ್ ಕರೆ ಮಾಡಿದ್ದರು. ಈ ವೇಳೆ ಅವಹೇಳನಕಾರಿಯಾಗಿ ಮಾತನಾ ಡಿದ್ದು, ಖಂಡನೀಯ ಎಂದು
ಅವರು ಹೇಳಿದರು.
ಯಾವುದೇ ಅಧಿಕಾರಿ ರೈತರ ಹಾಗೂ ಸಾರ್ವಜನಿಕರ ಬಗ್ಗೆ ಮಾತನಾಡುವಾಗ ಸೌಜನ್ಯದಿಂದ ವರ್ತಿಸಬೇಕು. ಆದರೆ, ಚೇತನ್‌ಕುಮಾರ್ ಅವರು ಅಸಭ್ಯವಾಗಿ ವರ್ತಿಸಿದ್ದಾರೆ. ಕೂಡಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಅವರು ಸಾರ್ವಜನಿಕವಾಗಿ ರೈತರ ಕ್ಷಮೆ ಕೇಳಬೇಕು. ಬೋರಾಪುರ ಅಂಗನವಾಡಿ ಕೇಂದ್ರ 11ರ ನೇಮಕಾತಿಗೆ ಕೂಡಲೇ ಪ್ರಕಟಣೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ‘ಸಿಡಿಪಿಒ ಚೇತನ್ ಕುಮಾರ್ ಈ ಹಿಂದೆ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಭ್ರಷ್ಟಾಚಾರ ನಡೆಸಿದ್ದರಿಂದ ಮದ್ದೂರಿಗೆ ವರ್ಗಾವಣೆಗೊಂಡಿದ್ದರು. ಇಲ್ಲಿಯೂ ಸುಮಾರು 8 ವರ್ಷಗಳಿಂದ ಇದ್ದಾರೆ ಎಂದು ಆರೋಪಿಸಿದ ಅವರು, ಸಿಡಿಪಿಒ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ಟಿ.ಎನ್.ನರಸಿಂಹಮೂರ್ತಿ, ಈ ಸಂಬಂಧ ಜಿ.ಪಂ ಸಿಇಒ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬೋರಾಪುರ ಶಂಕರೇಗೌಡ, ಮುಖಂಡರಾದ ಕೆ.ಜಿ.ಉಮೇಶ್, ಚಂದ್ರಶೇಖರ್, ಲಕ್ಷ್ಮಣ್ ಚನ್ನಸಂದ್ರ, ಸುಧೀರ್, ಉಮೇಶ, ಶಂಕರ, ರಾಮೇಗೌಡ, ಕೃಷ್ಣ, ಚಂದ್ರ, ರಾಮಯ್ಯ, ರಮೇಶ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.