ಕೆ.ಆರ್.ಪೇಟೆ: ಮನೆಯ ಮುಂದೆ ನಿಲ್ಲಿಸಿದ್ದ ಮೋಟಾರ್ ಬೈಕುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ಐದು ಮೋಟಾರ್ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮದ ರಾಕೇಶ್ ಬಂಧಿತ ಆರೋಪಿ. ಪಟ್ಟಣದ ಪ್ರೀತಂ ರೆಸ್ಟೋರೆಂಟ್ನಲ್ಲಿ ತಂಗಿದ್ದ ಸಚಿವ ನಾರಾಯಣಗೌಡರ ಅಂಗರಕ್ಷಕ ಭುವನೇಶ್ವರ ಮತ್ತು ಆಪ್ತಸಹಾಯಕರಾದ ಪ್ರಶಾಂತ್ ಅವರು ರೆಸ್ಟೋರೆಂಟ್ ಬಳಿ ನಿಂತಿದ್ದ ಬೈಕ್ ಅನ್ನು ಗಮನಿಸಿದ್ದಾರೆ. ಅದು ಚನ್ನರಾಯಪಟ್ಟಣದಲ್ಲಿ ಕಳ್ಳತನವಾಗಿದ್ದ ಬಜಾಜ್ ಪಲ್ಸರ್ ಬೈಕಿನಂತಿದ್ದನ್ನು ಕಂಡು ರಾಕೇಶ್ನನ್ನು ಮಾಲು ಸಮೇತ ಹಿಡಿದು ಪಟ್ಟಣ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಆರೋಪಿಯನ್ನು ವಿಚಾರಿಸಿದಾಗ ಇನ್ನಷ್ಟು ಬೈಕ್ ಕದ್ದಿರುವುದು ಬೆಳಕಿಗೆ ಬಂದಿದೆ.

ಸಿಪಿಐ ಸುಧಾಕರ್, ಪಿಎಸ್ಐ ಬಿ.ಪಿ.ಬ್ಯಾಟರಾಯಗೌಡ ಮಾರ್ಗದರ್ಶನದಲ್ಲಿ ಹೆಡ್ ಕಾನ್ಸ್ಟೆಬಲ್ ನಾಗರಾಜು, ಕಾನ್ಸ್ಟೆಬಲ್ಗಳಾದ ಜಯವರ್ಧನ್ ಮತ್ತು ಮನು ಕಾರ್ಯಾಚರಣೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.