ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕವಾಡಿ: 4 ಕೋಟಿ ವೆಚ್ಚದ ನಾಲೆಯ ಅಭಿವೃದ್ಧಿಗೆ ಚಾಲನೆ

Published 4 ಜೂನ್ 2023, 14:44 IST
Last Updated 4 ಜೂನ್ 2023, 14:44 IST
ಅಕ್ಷರ ಗಾತ್ರ

ಬೆಳಕವಾಡಿ: ಮಾಧವ ಮಂತ್ರಿ ನಾಲೆಯ ಕೊನೆಯ ಭಾಗದ ರೈತರ ಜಮೀನುಗಳಿಗೆ ಸರಾಗವಾಗಿ ನೀರು ಒದಗಿಸುವ ಉದ್ದೇಶದಿಂದ ನಾಲೆಯ ಅಭಿವೃದ್ಧಿ ಆದ್ಯತೆ ನೀಡಲಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಹೊಸಹಳ್ಳಿ ವ್ಯಾಪ್ತಿಯ ಮಾಧವ ಮಂತ್ರಿ ನಾಲೆಯ ಎಡೆದಂಡೆ ಮತ್ತು ಬಲದಂಡೆ ನಾಲೆಯ ₹4 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. 10 ಕಿ.ಮೀ. ವರೆಗೆ ನಾಲೆಯ ಒಳಪದರ ನವೀಕರಿಸಸಲಾಗುತ್ತಿದೆ.  650 ಎಕರೆ ಪ್ರದೇಶದ ರೈತರ ಜಮೀನುಗಳಿಗೆ ಸರಾಗವಾಗಿ ನೀರು ಹರಿದು ವ್ಯವಸಾಯಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಗ್ರಾ.ಪಂ.ಅಧ್ಯಕ್ಷ ಬಿ.ಎಂ.ಮಹದೇವ್, ಸದಸ್ಯರಾದ ರಘು, ಮಹದೇವಸ್ವಾಮಿ, ಚೇತನ್ ಕುಮಾರ್, ಮುಖಂಡರಾದ ಎಂ.ಸತೀಶ್ ಕುಮಾರ್, ಪಿ.ನಾಗಮಾದಶೆಟ್ಟಿ, ಅಶ್ವಥ್ ಕುಮಾರ್, ಮುಟ್ಟನಹಳ್ಳಿ ಅಂಬರೀಶ್, ಆರ್.ಎನ್.ವಿಶ್ವಾಸ್, ಪಾಟೇಲ್ ಪಾಪಣ್ಣ, ಟಿ.ಎಂ.ಮಹದೇವಪ್ಪ, ವೆಂಕಟೇಶ್, ಶಿವಮಲ್ಲಪ್ಪ, ಪರಮೇಶ್, ಸವಿತಾ ಶಂಕರ್, ಶಾಂತಬಸವರಾಜು, ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಎನ್.ದೀಪಶ್ರೀ, ಪಿಡಿಒ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT