ಶನಿವಾರ, ಮಾರ್ಚ್ 28, 2020
19 °C

ಆರತಿ ಉಕ್ಕಡದಲ್ಲಿ ಡಿಕೆಶಿ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಆರತಿ ಉಕ್ಕಡಕ್ಕೆ ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಭಾನುವಾರ ಭೇಟಿ ನೀಡಿ ಅಹಲ್ಯಾದೇವಿಗೆ (ಮಾರಮ್ಮ) ವಿಶೇಷ ಪೂಜೆ ಸಲ್ಲಿಸಿದರು.

ದೋಷ ಪರಿಹಾರಕ್ಕಾಗಿ ಪಕ್ಕದ ಕಲ್ಯಾಣಿಯಲ್ಲಿ ತಡೆ ಮತ್ತು ಕಟ್ಟೆ ಒಡೆಸಿದರು. ಸುಮಾರು 15 ನಿಮಿಷ ದೇವಾಲಯದಲ್ಲಿದ್ದ ಅವರು, ಪೂಜಾ ವಿಧಿ, ವಿಧಾನಗಳನ್ನು ಕೇಳಿ ತಿಳಿದುಕೊಂಡರು.

ಅಹಲ್ಯಾದೇವಿ ಮಾರಮ್ಮ ದೇವಾಲಯ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಎಂ.ಚಂದ್ರು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಕಾಂಗ್ರೆಸ್‌ ಮುಖಂಡ ಡಾ.ರವೀಂದ್ರ, ಶ್ಯಾದನಹಳ್ಳಿ ಬಾಬು, ಹರಳಹಳ್ಳಿ ದಯಾನಂದ್‌ ಜತೆಗಿದ್ದರು.

’ಮೈಸೂರಿಗೆ ಬಂದಿದ್ದ ಶಿವಕುಮಾರ್‌ ಆರತಿ ಉಕ್ಕಡದ ಅಹಲ್ಯಾದೇವಿ ಮಹಿಮೆ ತಿಳಿದು ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ’ ಎಂದು ಅವರ ಜತೆಗಿದ್ದವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು