ಕಿಕ್ಕೇರಿ: ಕೆಳಸ್ತರದ ಧ್ವನಿ ಇಲ್ಲದ ಸಮುದಾಯವಾದ ನೇಕಾರರಿಗೆ ಶಿಕ್ಷಣ ರಕ್ಷಾಕವಚ ಆಗಬೇಕಿದೆ ಎಂದು ಹಾಸನ ಕುರುಹಿನಶೆಟ್ಟಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಸಿ. ಕೃಷ್ಣಶೆಟ್ಟಿ ಹೇಳಿದರು.

ಪಟ್ಣಣದಲ್ಲಿ ಕುರುಹಿನಶೆಟ್ಟಿ ಸಂಘ ಬುಧವಾರ ಹಮ್ಮಿಕೊಂಡಿದ್ದ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧ್ವನಿ ಇಲ್ಲದ ಸಮುದಾಯದ ಮಕ್ಕಳಿಗೆ ಶಿಕ್ಷಣ ಧ್ವನಿಯಾದರೆ ಮಾತ್ರ ಮುಖ್ಯವಾಹಿನಿಯಲ್ಲಿ ಬದುಕಬಹುದಾಗಿದೆ. ನೇಕಾರಿಕೆ ಕಸುಬು ಅಳಿವಿನಂಚಿನಲ್ಲಿದೆ. ಕಚ್ಚಾವಸ್ತು, ಕಾರ್ಮಿಕರ ಕೊರತೆ, ಬೆಲೆ ಕುಸಿತದಂತಹ ಸಮಸ್ಯೆಗಳನ್ನು ಎದುರಿಸಲಾಗದೆ ಮಗ್ಗದ ಗುಂಡಿಗಳು ಗ್ರಾಮದಲ್ಲಿ ಮುಚ್ಚುತ್ತಿವೆ. ಕಸುಬು ಹರಸಿ ಪಟ್ಟಣಗಳಿಗೆ ಗುಳೇ ಹೋಗಿದ್ದಾರೆ. ಅನ್ಯಕಸುಬು ತಿಳಿಯದಿರುವ ಸಮುದಾಯಕ್ಕೆ ಆಸರೆಯಾಗಿ ಸರ್ಕಾರ ನಿಲ್ಲಬೇಕಿದೆ ಎಂದರು.

ಕೋವಿಡ್ ವೇಳೆ ಅಂಡ್ರಾಯಿಡ್ ಮೊಬೈಲ್ ಬಂತು. ಆನ್ಲೈನ್ ಶಿಕ್ಷಣ ಮರೆತು, ಮೊಬೈಲ್ ಚಟವಾಗಿ ಭವಿಷ್ಯದ ಮಕ್ಕಳಿಗೆ ಮಾರಕವಾಗುವಂತಾಗಿದೆ. ಪೋಷಕರು ತಿಳಿ ಹೇಳಿ, ಪುಸ್ತಕ, ಪತ್ರಿಕೆ ಓದಿ ಜ್ಞಾನವೃದ್ಧಿಸಿಕೊಳ್ಳಲು ತಿಳಿ ಹೇಳುವ ಕೆಲಸ ಮಾಡಿ ಎಂದು ತಿಳಿಹೇಳಿದರು.

ಶಶಿ ಸಂಜೀವಿನಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎಚ್. ಸಂಜೀವಶೆಟ್ಟಿ ಮಾತನಾಡಿ, ಹಿಂದುಳಿದ ತಮ್ಮ ಸಮಾಜದಲ್ಲಿ ಸಂಘಟನೆ ಕೊರತೆ ಕಾಡುತ್ತಿದೆ. ಯುವಕರು ಸಮುದಾಯದ ಸಾಂಘಿಕ ಶಕ್ತಿಗೆ ಮುಂದಾಗಿ ಎಂದು ವಿನಂತಿಸಿದರು.

ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಬಿಎ, ಬಿಇ ಮತ್ತಿತರ ಪದವಿ ಮುಗಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

ಸಮಾಜದ ಹೊಸ ವರ್ಷದ ದಿನದರ್ಶಿಕೆ, ಏಕಾದಶಿ, ದ್ವಾದಶಿ ಪೂಜೆ, ಸಿದ್ಧಾರೂಢಸ್ವಾಮಿ ಅವರಿಗೆ ಪಂಚಾಮೃತ ಅಭಿಷೇಕದೊಂದಿಗೆ ವಿವಿಧ ಪೂಜೆಗಳು ನಡೆದವು. ಅನ್ನ ದಾಸೋಹ ಏರ್ಪಡಿಸಲಾಗಿತ್ತು.

ಸೆಸ್ಕಾಂ ನಿವೃತ್ತ ಎಇಇ ತಿಮ್ಮಶೆಟ್ಟಿ, ಜಿಲ್ಲಾ ನೇಕಾರ ಸಮಾಜ ಒಕ್ಕೂಟದ ಅಧ್ಯಕ್ಷ ಹರಿಪ್ರಸಾದ್, ಹಾಸನ ಸಂಘದ ಅಧ್ಯಕ್ಷ ಕೆ.ಎಚ್. ನಾರಾಯಣಶೆಟ್ಟಿ, ಕಿಕ್ಕೇರಿ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ, ಕಾರ್ಯದರ್ಶಿ ಡಿ. ಉಮೇಶ್, ಉಪಾಧ್ಯಕ್ಷೆ ಎಸ್.ಆರ್. ವಿನೋದಮ್ಮ, ಜಂಟಿ ಕಾರ್ಯದರ್ಶಿ ಸುನೀತಾ ದಯಾನಂದ್, ಮೈಸೂರು ರಾಮಮಂದಿರ ಅಧ್ಯಕ್ಷ ಕೆ.ಜೆ. ರಾಮಶೆಟ್ಟಿ, ನಿವೃತ್ತ ಪ್ರೋಫೆಸರ್ ನಾರಾಯಣಶೆಟ್ಟಿ, ನಾಗೇಶ್, ಕೆ.ಆರ್. ಪಾಂಡು, ಸಿ.ಎಸ್. ಸಾವಿತ್ರಿ, ಭಾರತಿ, ಗಿರಿಜಾ, ಲೀಲಾವತಿ, ಪಾರ್ವತಿ, ಪುಟ್ಟಲಕ್ಷ್ಮೀ, ಪಂಕಜ ಭಾಗವಹಿಸಿದ್ದರು. .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.