ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

62 ಕುಟುಂಬ ನಿರುದ್ಯೋಗ ಭತ್ಯೆಗೆ ಅರ್ಹ: ನರೇಗಾ ಗ್ರಾಮಸಭೆಯಲ್ಲಿ ಸೀಮಾ ಮಾಹಿತಿ

ನಿಲುವಾಗಿಲು ಗ್ರಾ.ಪಂ ನರೇಗಾ ಗ್ರಾಮಸಭೆಯಲ್ಲಿ ಸೀಮಾ ಮಾಹಿತಿ
Last Updated 4 ಸೆಪ್ಟೆಂಬರ್ 2020, 2:01 IST
ಅಕ್ಷರ ಗಾತ್ರ

ಕೊಪ್ಪ: ‘ಗ್ರಾಮೀಣ ಭಾಗದ ಜನರು ಬಡವರ ಸಂಜೀವಿನಿಯಾದ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ನರೇಗಾ ತಾಲ್ಲೂಕು ಸಾಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕಿ ಸೀಮಾ ಹೇಳಿದರು.

ಸಮೀಪದ ನಿಲುವಾಗಿಲು ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ನಿಲುವಾಗಿಲು ಗ್ರಾ.ಪಂ. ವ್ಯಾಪ್ತಿಯ 62 ಕುಟುಂಬಗಳು ನಿರುದ್ಯೋಗ ಭತ್ಯೆಗೆ ಅರ್ಹವಾಗಿವೆ’ ಎಂದು ಹೇಳಿದರು.

‘ನರೇಗಾ ಯೋಜನೆಯ ಸಾಮಗ್ರಿ ವೆಚ್ಚದ ₹ 52 ಸಾವಿರ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿಲ್ಲ. ನಿಯಮಾನುಸಾರವಾಗಿ ಕೆಲವೆಡೆ ಕೊಟ್ಟಿಗೆಗಳು ನಿರ್ಮಾಣವಾಗದಿದ್ದರೂ ಬಿಲ್ ಪಾವತಿಯಾಗಿದೆ. ಕೆಲವು ಕಾಮಗಾರಿಗಳ ಅನುಷ್ಠಾನದ ಕಡತಗಳನ್ನು ಒದಗಿಸಿಲ್ಲ’ ಎಂದರು.

ಕಾರ್ಯದರ್ಶಿ ನಾಗರಾಜು ಮಾತನಾಡಿ, ‘15 ದಿನದೊಳಗೆ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸುವ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ನರೇಗಾವನ್ನು ಲೋಪವಾಗದಂತೆ ಅನುಷ್ಠಾನಗೊಳಿಸಲಾಗುವುದು’ ಎಂದು ಹೇಳಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹದೇವ್ ಅಧ್ಯಕ್ಷತೆ ವಹಿಸಿದ್ದರು.

ನರೇಗಾ ಎಂಜಿನಿಯರ್ ಅಮೃತ್, ಸಾರ್ವಜನಿಕ ಮತ್ತು ಸಂಪರ್ಕ ವಿಭಾಗದ ಸಂಯೋಜಕಿ ಮೇಘನಾ, ತಾಲ್ಲೂಕು ಬಿಸಿಎಂ ಅಧಿಕಾರಿ ಎನ್. ಮಂಜುನಾಥ್ ನಾಯ್ಡು ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT