ಮಂಡ್ಯ: ಅನಧಿಕೃತವಾಗಿ ಖಾಸಗಿ ವ್ಯಕ್ತಿಗಳಿಗೆ ಮಾಡಲಾಗಿರುವ ಭೂ ಮಂಜೂರಾತಿಯನ್ನು ರದ್ದು ಮಾಡಬೇಕು ಎಂಬುದನ್ನೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತಸಂಘದ ಸದಸ್ಯರು ನಗರದ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕಚೇರಿ ಬಳಿ ಸೇರಿದ ಕಾರ್ಯಕರ್ತರು ಅಧಿಕಾರಿಗಳು ಅಕ್ರಮ ಮಂಜೂರಾತಿ ಮಾಡಿದ್ದಾರೆ ಎಂದು ಆರೋಪಿಸಿ ಘೋಷಣೆ ಕೂಗಿದರು. ಉಪ ವಿಭಾಗಾಧಿಕಾರಿ ಶಿವಮೂರ್ತಿ ಮತ್ತು ತಹಶೀಲ್ದಾರ್ ಶಿವಕುಮಾರ ಬಿರಾದರ ಅವರಿಗೆ ಮನವಿ ನೀಡಲಾಯಿತು.

ಮಂಡ್ಯ ತಾಲ್ಲೂಕು ದುದ್ದ ಹೋಬಳಿ ಹುಳ್ಳೇನಹಳ್ಳಿ ಸರ್ವೆ ನಂ.191ರ ಎರಡು ಎಕರೆ ಭೂಮಿಯ ಆರ್‌ಟಿಸಿಯಲ್ಲಿ ಭೂ ಮಾಲೀಕರ ಹೆಸರು ಬರುತ್ತಿದ್ದು ಇದನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಹೊನಗಾನಹಳ್ಳಿ ಗ್ರಾಮದ ಸ.ನಂ.63 ರಲ್ಲಿ 2.17 ಎಕರೆ ಸರ್ಕಾರಿ ಗೋಮಾಳ ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕ, ಕಂದಾಯ ಇಲಾಖೆ ದಾಖಲಾತಿಗಳನ್ನು ಸಂರಕ್ಷಣೆ ಮಾಡದೆ ಕಡತ ಲಭ್ಯವಿಲ್ಲವೆಂಬ ಹಿಂಬರಹ ನೀಡುತ್ತಿರವುದು ಖಂಡನೀಯ, ಸಾರ್ವಜನಿಕ ಸ್ಮಶಾನಗಳನ್ನು ಅಭಿವೃದ್ಧಿ ಪಡಿಸದೆ ರಸ್ತೆ ಸಂಪರ್ಕ ನೀಡದೆ ಸುಳ್ಳು ವರದಿ ನೀಡಲಾಗಿದೆ. ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕ, ಆಹಾರ ಶಾಖೆ, ಪಿಂಚಣಿ ಶಾಖೆ ಭ್ರಷ್ಟ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದ ಮೇಲಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ ‘ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಈಡೇರಿಸುವುದಿಲ್ಲ, ಸೈನಿಕರಿಗೆ ಭೂಮಿಯನ್ನು ನೀಡುವುದಿಲ್ಲ. ಎಲ್ಲೋ ಹೊರಗಡೆ ಪ್ರಭಾವಿಗಳಿಗೆ ಬೆಟ್ಟದ ಭಾಗಗಳಲ್ಲಿ, ಅರಣ್ಯ ಪ್ರದೇಶದಲ್ಲಿ ರಾತ್ರೋರಾತ್ರಿ ಜಮೀನು ಮಂಜೂರು ಮಾಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನವಿ ಆಲಿಸಲು ಬಂದ ಅಧಿಕಾರಿಗಳನ್ನು ಸಂಘದ ಸದಸ್ಯರು ತರಾಟೆಗೆ ತೆಗೆದುಕೊಂಡರು. ಈ ವೇಳೆ ರೈತ ಸಂಘದ ಮುಖಂಡರಾದ ಲಿಂಗಪ್ಪಾಜಿ, ಅರಕೆರೆ ಪ್ರಸನ್ನ, ಶಂಕರ್ ಶಿವಳ್ಳಿ, ಎಂ.ಎಸ್.ಅಣ್ಣಯ್ಯ, ಕೆ.ಆರ್.ರವೀಂದ್ರ, ಬಿ.ಟಿ.ವಿಶ್ವನಾಥ್, ಎಚ್.ಡಿ.ಜಯರಾಂ, ಜಿ.ಎ.ಶಂಕರ್, ಗಾಣದಾಳು ಜಯರಾಂ ಇದ್ದರು.

ಅಧಿಕಾರಿಗಳ ವಿರುದ್ಧ ಕಾರ್ಯಕರ್ತರ ಆಕ್ರೋಶ ಪ್ರಭಾವಿ ವ್ಯಕ್ತಿಗಳಿಗೆ ಭೂ ಮಂಜೂರಾತಿ; ಆರೋಪ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ಸದಸ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.