ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀನಗರ: ಸಂಭ್ರಮದ ಆತ್ಮಲಿಂಗೇಶ್ವರಸ್ವಾಮಿ ತೆಪ್ಪೋತ್ಸವ

Last Updated 23 ಫೆಬ್ರುವರಿ 2023, 4:29 IST
ಅಕ್ಷರ ಗಾತ್ರ

: ಸಮೀಪದ ಹನುಮಂತ ನಗರದ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಅಂಗವಾಗಿ ನಡೆದ ಜಾತ್ರಾ ಮಹೋತ್ಸವದ ಅಂಗವಾಗಿ ಆಭಾರತೀನಗರತ್ಮಲಿಂಗೇಶ್ವರ ಸ್ವಾಮಿ ತೆಪ್ಪೋತ್ಸವ ನಡೆಯಿತು.

ಕ್ಷೇತ್ರದ ಪಾವನ ಗಂಗಾ ಕಲ್ಯಾಣಿ ಯಲ್ಲಿ ನಿರ್ಮಿಸಲಾಗಿದ್ದ ತೆಪ್ಪೋತ್ಸವ ಮಂಟಪಕ್ಕೆ ಆತ್ಮಲಿಂಗೇಶ್ವರ ಸ್ವಾಮಿ ದೇವಾಲಯದಿಂದ ಉತ್ಸವ ಮೂರ್ತಿಗಳನ್ನು ಬರಮಾಡಿಕೊಂಡು ಪ್ರತಿಷ್ಠಾಪಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಬಿಇಟಿ ಕಾರ್ಯನಿರ್ವಾಹಕ ಟ್ರಸ್ಟಿ ಆಶಯ್ ಮಧು ಮಾದೇಗೌಡ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ತೆಪ್ಪೋತ್ಸವ ಕಲ್ಯಾಣಿಯ ಮಧ್ಯಭಾಗಕ್ಕೆ ತೆರಳಿ ದೇವಾಲಯದೆಡೆಗೆ ಮುಖ ಮಾಡಿ ದಾಗ ಮಹಾ ಮಂಗಳಾರತಿ
ನೆರವೇರಿಸಲಾಯಿತು.

ಆತ್ಮಲಿಂಗೇಶ್ವರ ಸ್ವಾಮಿ ದೇವಾಲಯ ಸ್ಥಾಪನೆಯಾದಗಿನಿಂದ ಪ್ರಥಮ ಬಾರಿಗೆ ಆರಂಭಿಸಲಾಗಿರುವ ತೆಪ್ಪೋತ್ಸವ ವಿಜೃಂಭಣೆಯಿಂದ ನಡೆಯಿತು.

ತೆಪ್ಪೋತ್ಸವ ಮುಗಿದ ನಂತರ ಪಾರ್ವತಿ, ಪರಮೇಶ್ವರರ ಉತ್ಸವ ಮೂರ್ತಿಗಳನ್ನು ದೇವಾಲಯದ ಆವರಣಕ್ಕೆ ಕೊಂಡೊಯ್ದು ಶಯ ನೋತ್ಸವ ನಡೆಸಿ, ಮಹಾ ಮಂಗಳಾರತಿ ಮಾಡಿ ಪೂಜೆ ನೆರವೇರಿಸಲಾಯಿತು. ಕಲಾವಿದರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

ಪೂಜಾ ಕಾರ್ಯಕ್ರಮದ ನಿರ್ವಹಣೆ ಯನ್ನು ಭಾರತೀನಗರ ಚಾಮುಂಡೇಶ್ವರಿ ದೇವಾಲಯದ ಅರ್ಚಕರಾದ ಕಾರ್ತಿಕ್ ಆರಾಧ್ಯ, ಆತ್ಮಲಿಂಗೇಶ್ವರ ಸ್ವಾಮಿ ದೇವಾಲಯದ ಸಿದ್ದಲಿಂಗಪ್ಪ, ಶೇಖರಪ್ಪ ವಹಿಸಿದ್ದರು. ಭಾರತಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಟ್ರಸ್ಟಿಗಳಾದ ಮುದ್ದಯ್ಯ, ಕೆ.ಎಸ್.ಗೌಡ, ದೇವರಹಳ್ಳಿ ಬೋರಯ್ಯ, ಅಣ್ಣೂರು ಜಯರಾಮು, ಉಪನ್ಯಾಸಕ ಶಿವಲಿಂಗೇಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT