ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೃಷ್ಟ ಪರೀಕ್ಷೆಗೆ ಮುಂದಾದ ಪದವೀಧರರು, ಹಳ್ಳಿಗಳಲ್ಲಿ ರಂಗೇರುತ್ತಿದೆ ಪಂಚಾಯಿತಿ ಕಣ

Last Updated 20 ಡಿಸೆಂಬರ್ 2020, 2:47 IST
ಅಕ್ಷರ ಗಾತ್ರ

ಕೊಪ್ಪ: ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ಹಳ್ಳಿಗಳಲ್ಲಿ ರಂಗೇರುತ್ತಿದೆ. ಪದವೀಧರರು ಮತ್ತು ಯುವಕರು ಹೊಸ ಆಶಯದೊಂದಿಗೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಕೊಪ್ಪ ಹೋಬಳಿಯ 12 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾ.ಪಂನಲ್ಲಿ 2– 3 ಮಂದಿ ಪದವಿ ಮತ್ತು ಸ್ನಾತಕೋತ್ತರ ಪದವೀಧರರು ಕಣದಲ್ಲಿದ್ದಾರೆ. ಹೊಸ ಭರವಸೆ ಈಡೇರಿಸುವ ಮತ್ತು ಬದಲಾವಣೆ ತರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಗ್ರಾ.ಪಂ.ಗಳಿಗೆ ವಿದ್ಯಾವಂತರು ಆಯ್ಕೆಯಾಗಿ ಹೋದರೆ ವ್ಯವಸ್ಥೆ ಸರಿಹೋಗಬಹುದು ಎಂಬ ಭರವಸೆ ಹಳ್ಳಿಗರಲ್ಲಿದೆ.

ನಿಲುವಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದಿಗೆರೆ ಗ್ರಾಮದ ಎಂ.ಎಲ್.ಸುನೀಲ್ ಕುಮಾರ್ ಅವರು ಬಿಇ ಪದವೀಧರ. ಮನೆಯಲ್ಲಿದ್ದುಕೊಂಡು ಖಾಸಗಿ ಉದ್ಯೋಗ ಮಾಡಿಕೊಂಡಿದ್ದಾರೆ. ತಗ್ಗಹಳ್ಳಿ, ಮರಳಿಗ ಮತ್ತು ಬೆಸಗರಹಳ್ಳಿ ಮೊದಲಾದ ಗ್ರಾಮಗಳ ಚುನಾವಣಾ ಕಣದಲ್ಲಿ ಸ್ನಾತಕೋತ್ತರ ಪದವೀಧರರು, ಉದ್ಯೋಗ ಅರಸುತ್ತಿರುವವರೂ ಇದ್ದಾರೆ. ಈ ಬಾರಿ ಪದವಿ ಪಡೆದಿರುವ ಮಹಿಳಾ ಅಭ್ಯರ್ಥಿಗಳೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಜನ ಸೇವೆ ಮಾಡಬೇಕು, ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕು ಎಂಬ ಹಂಬಲವೂ ಹಲವರಲ್ಲಿದೆ.

ಯುವ ಸಮುದಾಯದಿಂದ ಗ್ರಾಮಗಳ ಅಭಿವೃದ್ಧಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ ಎನ್ನುತ್ತಾರೆ ನಿವೃತ್ತ ಪ್ರಾಂಶುಪಾಲ ಯಧುಶೈಲ ಸಂಪತ್.

ಪದವೀಧರರು ಚುನಾವಣಾ ಕಣದಲ್ಲಿರುವುದು ಉತ್ತಮ ಬೆಳವಣಿಗೆ. ಸರ್ಕಾರದ ಯೋಜನೆಗಳು ಮತ್ತು ಅವುಗಳ ಅನುಷ್ಠಾನಕ್ಕೆ, ಗ್ರಾಮಗಳ ಪ್ರಗತಿಗೆ ಸಾಕಾರವಾಗುತ್ತದೆ. ಆದರೂ ಕಡಿಮೆ ಶಿಕ್ಷಣ ಹೊಂದಿರು ವವರನ್ನೂ ಕಡೆಗಣಿಸುವಂತಿಲ್ಲ ಎನ್ನುತ್ತಾರೆ ತಹಶೀಲ್ದಾರ್ ವಿಜಯ್ ಕುಮಾರ್.

ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ನೇರವಾಗಿ ಜನರಿಗೆ ತಲುಪಿಸುವ ಮತ್ತು ಮದ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ನರೇಗಾ ಯೋಜನೆಯನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಮುದಿಗೆರೆಯಎಂ.ಎಲ್.ಸುನೀಲ್ ಕುಮಾರ್ ಹೇಳಿದರು.

ಲಂಚರಹಿತವಾಗಿ, ಪಾರದರ್ಶ ಕವಾಗಿ ಆಡಳಿತ ನೀಡುವ ಸಲುವಾಗಿ ಮತ್ತು ಜನ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳಲು ರಾಜಕೀಯ ಹಾದಿಯನ್ನು ಹಿಡಿದಿದ್ದೇನೆ ಎನ್ನುವುದು ಬೆಸಗರಹಳ್ಳಿಯ ಅಭಿಲಾಷ್ ಅವರ ಅಭಿಲಾಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT