ಪ್ರತಿ ವರ್ಷದಂತೆ ಮಾಘ ಮಾಸದ ರಥಸಪ್ತಮಿಯಂದು ಹೇಮಗಿರಿ ಕಲ್ಯಾಣ ವೆಂಕಟರಮಣಸ್ವಾಮಿಯವರ ಬ್ರಹ್ಮರಥೋತ್ಸವವು ಫೆ.5ರಂದು ನಡೆಯಲಿದ್ದು ಅದಕ್ಕಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ –ಕೈಂಕರ್ಯಗಳು ಜ.28ರಿಂದಲೇ ಅರ್ಚಕರಾದ ರಾಮಭಟ್ಟರ ನೇತೃತ್ವದಲ್ಲಿ ಆರಂಭವಾಗಿವೆ. ಕ್ಷೇತ್ರದ ಆರಾಧ್ಯ ದೈವ ಕಲ್ಯಾಣ ವೆಂಕಟರಮಣಸ್ವಾಮಿ ಅವರ ಉತ್ಸವ ಮೂರ್ತಿಯನ್ನು ಬಂಡೀಹೊಳೆ ಗ್ರಾಮದಿಂದ ಹೇಮಗಿರಿ ಬೆಟ್ಟಕ್ಕೆ ತರಲಾಗಿದ್ದು ವಿವಿಧ ಪೂಜೆ ಹೋಮ ಹವನಗಳು ನಡೆದಿದೆ. ಫೆ.4ರಂದು ಮಧ್ಯಾಹ್ನ 1 ಗಂಟೆಗೆ ಕಲ್ಯಾಣ ವೆಂಕಟರಮಣ ಸ್ವಾಮಿಯ ದೇವರ ಉತ್ಸವವನ್ನು ಮಂಟಪಕ್ಕೆ ಬಿಜು ಮಾಡಿಸುವುದು. ಅದೇ ದಿನ ರಾತ್ರಿ 8 ಗಂಟೆಗೆ ದೇವರ ಉತ್ಸವ ಕಲ್ಯಾಣೋತ್ಸವ ನಡೆಯಲಿದೆ. ಫೆ.9ರಂದು ರಾತ್ರಿ 8 ಗಂಟೆಗೆ ಹೇಮಾವತಿ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.