ನಾಗಮಂಗಲ: ಮದುವೆಯಾಗಿ ಕೇವಲ 11 ತಿಂಗಳಿಗೆ ಗಂಡ ಕೋವಿಡ್–19ನಿಂದ ಮೃತಪಟ್ಟಿದ್ದು, ಅಂತ್ಯಸಂಸ್ಕಾರದ ಬಳಿಕ ಪತ್ನಿ ಮನನೊಂದು ನೇಣಿಗೆ ಶರಣಾಗಿದ್ದಾಳೆ.

ಇದನ್ನೂ ಓದಿ:ಕೋವಿಡ್ಗೆ ಪತಿ ಬಲಿ: ಪತ್ನಿ ಆತ್ಮಹತ್ಯೆ

ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಬೊಮ್ಮೇನಹಳ್ಳಿಯ ಕಿರಣ್ ಅವರ ಪತ್ನಿ ಪೂಜಾ ಮೃತರು.

ಕಳೆದ 11 ತಿಂಗಳ ಹಿಂದೆ ವಿವಾಹವಾಗಿದ್ದ ನವ ಜೋಡಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ವಾಸವಾಗಿದ್ದರು. ಆದರೆ ಕಿರಣ್‌ಗೆ ಕೋವಿಡ್ ಸೋಂಕು ತಗುಲಿತ್ತು. ಅಲ್ಲದೇ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಬೆಳಿಗ್ಗೆ ಕಿರಣ್ ಸಾವನ್ನಪ್ಪಿದ್ದಾನೆ.

ನಂತರ ಮೃತದೇಹವನ್ನು ಕಿರಣ್ ಅವರ ಗ್ರಾಮ ಬೊಮ್ಮೇನಹಳ್ಳಿಗೆ ತಂದು ಅಂತ್ಯಕ್ರಿಯೆ ಮಾಡಲಾಗಿತ್ತು. ನಂತರ ಮನೆಗೆ ಬಂದ ಪತ್ನಿ ಪೂಜಾ ಮನನೊಂದು ಮಧ್ಯಾಹ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗ-ಸೊಸೆಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.