ಶುಕ್ರವಾರ, ಜೂನ್ 18, 2021
21 °C
ವಿವಿಧೆಡೆಯಿಂದ ಬರುತ್ತಿರುವ ಜನರು

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಕೋವಿಡ್‌ನಿಂದ ಬೆಂಗಳೂರಿನಲ್ಲಿ ಮೃತಪಟ್ಟವರ ಅಸ್ಥಿಯನ್ನು ಪಟ್ಟಣದ ಕಾವೇರಿ ನದಿಯಲ್ಲಿ ತಂದು ವಿಸರ್ಜನೆ ಮಾಡಲಾಗುತ್ತಿದೆ.

ಮೂರು ದಿನಗಳಿಂದ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಪ್ರಕ್ರಿಯೆ ಹೆಚ್ಚಾಗಿದೆ. ಪಟ್ಟಣದ ಸೋಪಾನಕಟ್ಟೆ ಮತ್ತು ಪಶ್ಚಿಮವಾಹಿನಿ ಬಳಿ, ಕಾವೇರಿ ನದಿಯಲ್ಲಿ ತಮ್ಮ ಬಂಧುಗಳ ಅಸ್ಥಿಯನ್ನು ವಿಸರ್ಜನೆ ಮಾಡುತ್ತಿದ್ದಾರೆ.

ಬೆಂಗಳೂರು ಮಾತ್ರವಲ್ಲದೆ ಮೈಸೂರಿನಿಮದಲೂ ಅಸ್ಥಿ ವಿಸರ್ಜನೆಗೆ ಜನರು ಬರುತ್ತಿದ್ದಾರೆ.

ವೈದಿಕರ ಹಿಂದೇಟು: ಬೆಂಗಳೂರಿ ನಿಂದ ಬಂದವರಿಂದ ಸೋಂಕು ಹರಡುವ ಭಯದಿಂದ ಅಸ್ಥಿ ವಿಸರ್ಜನೆಗೆ
ಕೆಲವು ವೈದಿಕರು ಹಿಂದೇಟು ಹಾಕುತ್ತಿದ್ದಾರೆ. ಅಸ್ಥಿ ವಿಸರ್ಜನೆ ವಿಧಿ, ವಿಧಾನಗಳನ್ನು ನೆರವೇರಿಸಲು ಒಪ್ಪುತ್ತಿಲ್ಲ. ಕೆಲವರು ವೈದಿಕರು ಕೇಳಿದಷ್ಟು ಹಣ ಕೊಟ್ಟು ಅಸ್ಥಿ ವಿಸರ್ಜನೆ ಕೈಂಕರ್ಯ ಪೂರೈಸಿ ಹೋಗುತ್ತಿದ್ದಾರೆ. ಮತ್ತೆ ಕೆಲವರು ತಾವೇ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡುತ್ತಿದ್ದಾರೆ.

‘ಏ.20ರಿಂದೀಚೆಗೆ ಈಚೆಗೆ ಪಟ್ಟಣ ಮತ್ತು ಆಸುಪಾಸಿನಲ್ಲಿ ಅಸ್ಥಿ ವಿಸರ್ಜನೆ, ಪಿಂಡ ಪ್ರದಾನ ಪ್ರಕ್ರಿಯೆಗಳು ಹೆಚ್ಚಿವೆ. 20ರಂದು ಒಂದೇ ದಿನ 60ಕ್ಕೂ ಹೆಚ್ಚು ಮಂದಿ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ತಮ್ಮ ಬಂಧುಗಳು ಅಸ್ಥಿ ವಿಸರ್ಜನೆ ಮಾಡಿದ್ದಾರೆ. ಗುರುವಾರ 30ಕ್ಕೂ ಹೆಚ್ಚು ಮಂದಿ ಬೆಂಗಳೂರಿಗರು ಅಸ್ಥಿ ವಿಸರ್ಜನೆ ಮಾಡಿ ಹೋಗಿದ್ದಾರೆ’ ಎಂದು ಪಟ್ಟಣದ ವೈದಿಕರೊಬ್ಬರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು