ಶನಿವಾರ, ಸೆಪ್ಟೆಂಬರ್ 18, 2021
30 °C

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ‘ಚಾರ್ವಿಕಾ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕೇವಲ 1 ವರ್ಷ 10 ತಿಂಗಳ ಪುಟಾಣಿ, ಮದ್ದೂರು ತಾಲ್ಲೂಕು ಗೊರವನಹಳ್ಳಿ ಗ್ರಾಮದ ವಿ.ಚಾರ್ವಿಕಾ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದು ಆಶ್ಚರ್ಯ ಸೃಷ್ಟಿಸಿದ್ದಾಳೆ.

ಈಚೆಗೆ ನಡೆದ ಸ್ಪರ್ಧೆಯಲ್ಲಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಸಂಸ್ಥೆ ಚಾರ್ವಿಕಾಳ ಪ್ರತಿಭೆ ಗುರುತಿಸಿದ್ದು ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದೆ.

ಎನ್‌.ವಿಕಾಸ್‌ ಹಾಗೂ ಹರ್ಷಿತಾಶ್ರೀ ದಂಪತಿಯ ಪುತ್ರಿಯಾಗಿರುವ ಚಾರ್ವಿಕಾ ತನ್ನ ನೆನಪಿನ ಶಕ್ತಿಯಿಂದ ಸಣ್ಣ ವಯಸ್ಸಿನಲ್ಲೇ ಸಾಧನೆ ಮಾಡಿದ್ದಾಳೆ.

ಚಾರ್ವಿಕಾ ಪ್ರಾಣಿ, ಪಕ್ಷಿಗಳ ಹೆಸರು ಹೇಳುವ ಜೊತೆಗೆ ಅವುಗಳ ಧ್ವನಿಯನ್ನೂ ಹೊರಹೊಮ್ಮಿಸುತ್ತಾಳೆ. ವಿವಿಧ ಬಗೆಯ ಹಣ್ಣುಗಳು, ವಾಹನಗಳ ಹೆಸರುಗಳನ್ನು ಹೇಳುತ್ತಾಳೆ. ಮನುಷ್ಯನ ದೇಹದ ಅಂಗಗಳ ಹೆಸರುಗಳನ್ನು ಗುರುತಿಸುತ್ತಾಳೆ, ಮನೆ ಬಳಕೆಯ ವಸ್ತುಗಳ ಹೆಸರು ಹೇಳುತ್ತಾಳೆ. ಇಂಗ್ಲಿಷ್‌ ವರ್ಣಮಾಲೆಯ ಫೋನಿಕ್ಸ್‌ ಹಾಡಿ ಆಶ್ಚರ್ಯ ಸೃಷ್ಟಿಸುತ್ತಾಳೆ.

‘ನಮ್ಮ ಮಗುವಿನ ಸಾಧನೆ ಕಂಡು ಖುಷಿಯಾಗಿದೆ, ಇದಕ್ಕೆ ನನ್ನ ತಂದೆ ಶಂಕರ್‌, ತಾಯಿ ಜಯರತ್ನಾ ಅವರ ಮನೆಪಾಠವೇ ಕಾರಣ. ಎಲ್ಲರ ಆಶೀರ್ವಾದದಿಂದ ಮಗಳು ಸಾಧನೆ ಮಾಡಿದ್ದಾಳೆ’ ಎಂದು ಚಾರ್ವಿಕಾ ತಾಯಿ ಹರ್ಷಿತಾಶ್ರೀ ಸಂತಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು