ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಅಂತರರಾಜ್ಯ ಕಳ್ಳನ ಬಂಧನ: ₹10 ಲಕ್ಷ ಮೌಲ್ಯದ ಚಿನ್ನಾಭರಣ ವಶ

Published : 18 ಆಗಸ್ಟ್ 2024, 15:28 IST
Last Updated : 18 ಆಗಸ್ಟ್ 2024, 15:28 IST
ಫಾಲೋ ಮಾಡಿ
Comments

ಮಂಡ್ಯ: ವಾಟರ್ ಮೀಟರ್ ಪರಿಶೀಲನೆ ನೆಪ ಹೇಳಿ ವಂಚಿಸಿ ಕಳ್ಳತನ ಮಾಡುತ್ತಿದ್ದ ಅಂತರ ರಾಜ್ಯ ಕಳ್ಳನನ್ನ ಬಂಧಿಸಿರುವ ಮಂಡ್ಯ ಪೊಲೀಸರು, ₹10 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ಅನ್ನು ವಶ ಪಡಿಸಿಕೊಂಡಿದ್ದಾರೆ.

ತಮಿಳುನಾಡು ಮೂಲದ ರವಿ (29) ಬಂಧಿತ ಆರೋಪಿ. ಜೂನ್‌ 26ರಂದು ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಪುಷ್ಪವತಿ ಅವರ ಮನೆಗೆ ಧಾವಿಸಿದ ರವಿ ಸೇರಿ ಮೂವರು ಆರೋಪಿಗಳು, ವಾಟರ್ ಮೀಟರ್ ಪರಿಶೀಲನೆಗೆ ಬಂದಿದ್ದು, ತೋರಿಸುವಂತೆ ತಿಳಿಸಿದ್ದಾರೆ.

ಆರೋಪಿಗಳಲ್ಲಿ ಇಬ್ಬರು ವ್ಯಕ್ತಿಗಳು ಮನೆಯ ಮೇಲೆ ತೆರಳಿ ಟ್ಯಾಂಕ್ ಪರಿಶೀಲನೆಗೆ ತೊಡಗಿದರೆ, ಮತ್ತೊಬ್ಬ  ಮನೆಯೊಳಗೆ ತೆರಳಿ ಕೊಠಡಿಯಲ್ಲಿದ್ದ ₹50 ಸಾವಿರ, 180 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಮಂಡ್ಯ ಪೂರ್ವ ಠಾಣೆ ಪೊಲೀಸರು ತನಿಖೆ ನಡೆಸಿ ಬೆಂಗಳೂರಿನ ಅತ್ತಿಬೆಲೆಯಲ್ಲಿ ಆರೋಪಿ ರವಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.

ಆರೋಪಿಯ ವಿರುದ್ಧ ರಾಜಸ್ಥಾನ, ಜೋಧ್‌ಪುರ ಹಾಗೂ ಮುಂಬೈಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಪೂರ್ವ ಠಾಣೆ ಪಿಎಸ್‌ಐ ಶೇಷಾದ್ರಿಕುಮಾರ್, ಸಿಬ್ಬಂದಿ ಲಿಂಗರಾಜು, ಮಹೇಶ್, ಅನಿಲ್‌ಕುಮಾರ್, ಉಮರ್ ಅಹಮ್ಮದ್ ಫಾರೂಕಿ, ಮಂಜುನಾಥ, ಶ್ರೀನಿವಾಸ ಇತರರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT