ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ವೆಚ್ಚ
ತಾಲ್ಲೂಕಿನ ವಿದ್ಯಾರ್ಥಿನಿಲಯಗಳಿಗೆ ತಲಾ ₹93440 ದರದಂತೆ ಒಟ್ಟು ₹7.47 ಲಕ್ಷ ಭರಿಸಿ 8 ಟಿ.ವಿ.ಗಳನ್ನು ಖರೀದಿ ಮಾಡಲಾಗಿದೆ. ಆದರೆ 43 ಇಂಚಿನ ಎಲ್‌ಇಡಿ ಟಿ.ವಿ.ಯ ಮಾರುಕಟ್ಟೆ ದರ ₹47999 ಇದೆ. ಅಂದರೆ ಮಾರುಕಟ್ಟೆ ದರಕ್ಕಿಂತ ₹3.63 ಲಕ್ಷ ಮೊತ್ತವನ್ನು ಟಿ.ವಿ ಸಂಸ್ಥೆಗಳ ಜೊತೆ ಭಾಗಿಯಾಗಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತನಿಖಾ ವರದಿಯಲ್ಲಿ ನಮೂದಿಸಲಾಗಿದೆ.