ಶನಿವಾರ, ಜುಲೈ 31, 2021
20 °C

ಕೆಆರ್‌ಎಸ್‌ ಅಣೆಕಟ್ಟೆ ಮೇಲೆ ಜೀಪ್‌ ಚಾಲನೆ; ದೃಶ್ಯ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆ ಮೇಲೆ ಯುವಕನೊಬ್ಬ ಪೊಲೀಸ್‌ ಜೀಪ್‌ ಚಾಲನೆ ಮಾಡಿದ್ದು, ಆ ದೃಶ್ಯವನ್ನು ಪೊಲೀಸ್‌ ಅಧಿಕಾರಿಯೇ ಸೆರೆ ಹಿಡಿದಿದ್ದಾರೆ ಎನ್ನಲಾದ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಾಲ್ಲೂಕಿನ ಬೆಳಗೊಳ ಗ್ರಾಮದ ಸೂರ್ಯ ಎಂಬಾತ ಎರಡು ವಾರಗಳ ಹಿಂದೆ ಜಲಾಶ ಯದ ಮುಖ್ಯ ದ್ವಾರದಿಂದ ಮಧ್ಯ ಭಾಗದವರೆಗೆ ಜೀಪ್‌ ಚಲಾಯಿಸಿದ್ದಾನೆ. ಜಲಾಶಯದ ಭದ್ರತೆಗೆ ನಿಯೋಜಿಸಿರುವ ಕೈಗಾ ರಿಕಾ ಭದ್ರತಾ ಪಡೆಯ ಇನ್‌ಸ್ಪೆಕ್ಟರ್‌ ಸ್ವಾಮಿ ಎಂಬವರು ಯುವಕನ ಕೈಗೆ ಜೀಪ್‌ ಕೊಟ್ಟು, ಆತ ಚಾಲನೆ ಮಾಡುವ ದೃಶ್ಯವನ್ನು ತಾವು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ ಎಂದು ಚರ್ಚೆ ಜಾಲತಾಣಗಳಲ್ಲಿ ನಡೆದಿದೆ.

‘ಈ ಕುರಿತು ಸೋಮವಾರ ಸಭೆ ನಡೆಸಿ ಸಂಬಂಧಿಸಿದ ಅಧಿಕಾರಿಯಿಂದ ವಿವರಣೆ ಕೇಳಲಾ ಗುವುದು’ ಎಂದು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ ವಾಸುದೇವ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು