ಮಳವಳ್ಳಿ: ಮಾಜಿ ಸಚಿವ ದಿವಂಗತ ಕೆ.ಎನ್.ನಾಗೇಗೌಡ ಅವರ ಜೀವನ ಹಾಗೂ ದೂರದೃಷ್ಟಿಯ ಚಿಂತನೆಗಳು ಪ್ರಸ್ತುತದ ಯುವ ಪೀಳಿಗೆಗೆ ಮಾದರಿಯಾಗಿವೆ ಎಂದು ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಶಾಂತಿ ಕಾಲೇಜು ಆವರಣದಲ್ಲಿ ಗುರುವಾರ ಮಾಜಿ ಸಚಿವ ದಿ.ಕೆ.ಎನ್.ನಾಗೇಗೌಡ ಅವರ 22ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವಾ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಕೆ.ಎನ್.ನಾಗೇಗೌಡ ಅವರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದೃಢಸಂಕಲ್ಪದೊಂದಿಗೆ ಸಂಕಷ್ಟದಲ್ಲಿದ್ದರೂ ಛಲಬಿಡದ ತ್ರಿವಿಕ್ರಮನಂತೆ ಶಾಂತಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡಿ ಅವರ ಜೀವನ ರೂಪಿಸಿದರು. ಅವರು ಶಾಸಕ, ಸಚಿವರಾಗಿ ತಮ್ಮ ಇಡೀ ಜೀವನವನ್ನೇ ಸಮಾಜಕ್ಕೆ ಸಮರ್ಪಿಸಿದ ಮಹಾನ್ ವ್ಯಕ್ತಿಯಾಗಿ ರೂಪುಗೊಂಡಿದ್ದರು ಎಂದು ಬಣ್ಣಿಸಿದರು.

ಕೆಆರ್ಎಸ್ ಜಲಾಶಯದ ಕೊನೆಯ ಭಾಗವಾದ ಮಳವಳ್ಳಿ-ಮದ್ದೂರಿನ ನಾಲೆಗಳಿಗೆ ನೀರು ಪೂರೈಸಲು ಸಾಕಷ್ಟು ಶ್ರಮ ವಹಿಸಿದ್ದ ಅವರು ಪಶು ಸಂಗೋಪನಾ ಸಚಿವರಾಗಿ ಇಲಖೆಯಲ್ಲಿ ಹೊಸ ಸಂಚಲನ ಮೂಡಿಸಿ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದು, ಜನಮಾನಸದಲ್ಲಿ ಉಳಿದ್ದಾರೆ. ಶಾಂತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ನಾಗೇಗೌಡ ಅವರನ್ನು ಆದರ್ಶವಾಗಿ ಪರಿಗಣಿಸಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಶಾಂತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ, ಮಾಜಿ ಶಾಸಕಿ ಎಂ.ಕೆ.ನಾಗಮಣಿ ನಾಗೇಗೌಡ ಮಾತನಾಡಿ, ಕೆ.ಎನ್.ನಾಗೇಗೌಡರು ತಮ್ಮ ಜೀವನವನ್ನು ಸಾರ್ವಜನಿಕ ಸೇವೆಗೆ ಮೀಸಲಿಟ್ಟಿದ್ದರು. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕನಸು ಹೊತ್ತು ಈ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಆರ್ಯವೇದ ಮತ್ತು ನರ್ಸಿಂಗ್ ಕಾಲೇಜು ಆರಂಭಿಸುವ ಚಿಂತನೆ ಇದೆ ಎಂದು ಹೇಳಿದರು.

ಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಪುಟ್ಟರಾಜು ಮಾತನಾಡಿ, ಕೆ.ಎನ್.ನಾಗೇಗೌಡರ ಅಭಿಮಾನಿಗಳು ಹಾಗೂ ಸ್ಥಳೀಯ ಮುಖಂಡರ ಒತ್ತಾಯದಂತೆ ಕಾಲೇಜಿನ ಮುಂಭಾಗ ಅವರ ಪ್ರತಿಮೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ಹೇಳಿದರು.

ಕೆ.ಎನ್.ನಾಗೇಗೌಡರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು. ಇತ್ತೀಚೆಗೆ ನಿಧನರಾದ ಶಾಂತಿ ಶಿಕ್ಷಣ ಸಂಸ್ಥೆಯ ಟ್ರಸ್ಟ್ ಚಿನ್ನಾಳು ಅವರಿಗೆ ಶ್ರದ್ಧಾಂಜಲಿ ಸೂಚಿಸಲಾಯಿತು.

ಪ್ರಮುಖರಾದ ಚೌಡೇಗೌಡ, ಯಮದೂರು ಸಿದ್ದರಾಜು, ಎಚ್.ಎಂ.ಮಹದೇವಸ್ವಾಮಿ, ಎಂ.ಎಚ್.ಕೆಂಪಯ್ಯ, ಎಚ್.ತಿಮ್ಮೇಗೌಡ, ಅನಿತಾ ಸಂಜೀವ, ಎಂ.ಎನ್.ಅರ್ಜುನ್ ಗೌಡ, ಮಾರ್ಕಡೇಯ, ಶಿವಕುಮಾರ್, ಮಂಜು, ಅನಿತಾ, ಶಿವಪ್ಪ, ನಾಗರಾಜು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.