ಶ್ರೀರಂಗಪಟ್ಟಣ: ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿನ ಜಾಗ ಒತ್ತುವರಿಯಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸರ್ವೆ, ಕಂದಾಯ ಮತ್ತು ನೀರಾವರಿ ನಿಗಮದ ಅಧಿಕಾರಿಗಳ ತಂಡ ಸರ್ವೆ ಕಾರ್ಯ ಆರಂಭಿಸಿದ್ದಾರೆ.

ಕೆಆರ್ಎಸ್ ಡ್ಯಾಂ ಹಿಂಭಾಗದ ಪ್ರದೇಶದಲ್ಲಿ ಒತ್ತುವರಿಯಾಗಿದೆ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಮತ್ತು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಡಿಸಿಎಂ ಅವರಿಗೆ ಪತ್ರ ಬರೆದಿದ್ದರು. ಪತ್ರಕ್ಕೆ ಸ್ಪಂದಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಗಡಿ ಗುರುತಿಸಿ, ವರದಿ ನೀಡುವಂತೆ ಆದೇಶಿಸಿದ್ದಾರೆ.

ಪ್ರಥಮ ಹಂತದಲ್ಲಿ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಹೋಬಳಿ ವ್ಯಾಪ್ತಿಯ ಗಿರಿಯಾರಹಳ್ಳಿ, ಚಿಕ್ಕಾಯರಳ್ಳಿ, ಹೊಸ ಕನ್ನಂಬಾಡಿ, ಬಿಂಡಹಳ್ಳಿ, ಅಂತನಹಳ್ಳಿ, ಮಲ್ಲಿಗೆರೆ ಮತ್ತು ಹಳೇ ಸಾಯಪ್ಪನಹಳ್ಳಿ ಗ್ರಾಮಗಳ ಸರಹದ್ದಿನಲ್ಲಿ ಅಣೆಕಟ್ಟೆಯ ಗಡಿ ಗುರುತಿಸುವ ಕಾರ್ಯ ನಡೆಯುತ್ತಿದೆ. 15 ಮಂದಿ ಸರ್ವೆಯರ್ಗಳ ತಂಡ ಅಳತೆ ಕಾರ್ಯದಲ್ಲಿ ತೊಡಗಿದ್ದು, ಹಳೆ ಸಾಯಪ್ಪನಹಳ್ಳಿ ಸರಹದ್ದಿನಲ್ಲಿ ಸರ್ವೆ ಕಾರ್ಯ ಮಗಿದಿದೆ.

‘ಮೇಲಧಿಕಾರಿಗಳ ಸೂಚನೆ ಮೇರೆಗೆ ಸರ್ವೆ ಕಾರ್ಯ ನಡೆಯುತ್ತಿದೆ. ಸರ್ವೇಯರ್ಗಳ ಜತೆಗೆ ಕಂದಾಯ ನಿರೀಕ್ಷಕರು, ಗ್ರಾಮಾಡಳಿತ ಅಧಿಕಾರಿಗಳು ಮತ್ತು ನೀರಾವರಿ ನಿಗಮದ ಎಂಜಿನಿಯರ್ಗಳ ತಂಡ ಅವಿರತವಾಗಿ ಕೆಲಸ ಮಾಡುತ್ತಿದೆ. ಜಲಾಶಯದಲ್ಲಿ ಸದ್ಯ 123 ಅಡಿಗಳಷ್ಟು ನೀರು ನಿಂತಿದೆ. ನೀರಿಲ್ಲದ ಸ್ಥಳಗಳಲ್ಲಿ ಅಳತೆ ಕಾರ್ಯ ಪ್ರಗತಿಯಲ್ಲಿದೆ’ ಎಂದು ಕಂದಾಯ ನಿರೀಕ್ಷಕ ಕೆ.ಆರ್. ಪುರುಷೋತ್ತಮ ಹೇಳಿದ್ದಾರೆ.

ಗಡಿ ಗುರುತಿಸಿ, ವರದಿ ನೀಡುವಂತೆ ಡಿ.ಕೆ.ಶಿವಕುಮಾರ್ ಆದೇಶ 15 ಮಂದಿ ಸರ್ವೆಯರ್ಗಳ ತಂಡದಿಂದ ಅಳತೆ ಕಾರ್ಯ ಜಲಾಶಯದಲ್ಲಿ ಸದ್ಯ 123 ಅಡಿಗಳಷ್ಟು ನೀರು

‘ಸರ್ವೆಗೆ 45 ದಿನಗಳ ಗಡುವು’: ಕೆಆರ್ಎಸ್ ಜಲಾಶಯ 132 ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಗಡಿಗಳಲ್ಲಿ ಜಲಾಶಯಕ್ಕೆ ಸೇರಿದ ಗಡಿಯನ್ನು ಗುರುತಿಸಲು ಉಪ ವಿಭಾಗಾಧಿಕಾರಿ ತಹಶೀಲ್ದಾರ್ ಎಡಿಎಲ್ಆರ್ ಮತ್ತು ನೀರಾವರಿ ನಿಗಮದ ಎಂಜಿನಿಯರ್ಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಮಂಡ್ಯ ಮತ್ತು ಮೈಸೂರು ಜಿಲ್ಲಾಡಳಿತ ಜಲಾಶಯದ ಗಡಿಯನ್ನು ಗುರುತಿಸಿ ವರದಿ ನೀಡುವಂತೆ ಸಮಿತಿಗೆ 45 ದಿನಗಳ ಗಡುವು ನೀಡಿದೆ. ಮೂರು ತಂಡಗಳು ನಿರಂತರವಾಗಿ ಸರ್ವೆ ಕಾರ್ಯದಲ್ಲಿ ನಿರತವಾಗಿವೆ. ‘ಕೆಆರ್ಎಸ್ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಒತ್ತುವರಿ ನಡೆದಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸರ್ವೆ ಕಾರ್ಯ ಆರಂಭವಾಗಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಒತ್ತುವರಿಯಾಗಿದೆ ಎಂಬುದು ಗೊತ್ತಿಲ್ಲ. ಜಲಾಶಯ ನಿರ್ಮಾಣದ ಸಂದರ್ಭದ ಅವಾರ್ಡ್ ರಿಜಿಸ್ಟರ್ ಇದ್ದು ಮೈಸೂರು ಮತ್ತು ಮಂಡ್ಯ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ’ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ವಿ. ಜಯಂತ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.