ಶ್ರೀರಂಗಪಟ್ಟಣ: ಪಟ್ಟಣದ ಎಂ.ಕೆ. ಆಗ್ರೋಟೆಕ್ ಕಾರ್ಖಾನೆಯ ಸಮೀಪ ಕಾರ್ಮಿಕ ಶನಿವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜಸ್ಥಾನ ಮೂಲದ ಖಾನರಾಮ (35) ಆತ್ಮಹತ್ಯೆ ಮಡಿಕೊಂಡವರು.

ಇವರು ಮೂರು ತಿಂಗಳುಗಳಿಂದ ಎಂ.ಕೆ. ಆಗ್ರೋಟೆಕ್ ಕಾರ್ಖಾನೆಯಲ್ಲಿ ಮರಗೆಲಸ ಮಾಡುತ್ತಿದ್ದು, ಕಾರ್ಖಾನೆಯ ಕೊಠಡಿಯಲ್ಲೇ ಉಳಿದುಕೊಂಡಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಲಾಕ್ಡೌನ್ ಘೋಷಣೆಯಿಂದ ತಮ್ಮ ಊರಿಗೆ ಹೋಗಲು ಆಗದೆ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

ಸಿಗದ ಪಾಸ್: ಖಾನಾರಾಮ ಅವರ ಮೃತದೇಹವನ್ನು ರಾಜಸ್ಥಾನಕ್ಕೆ ಕೊಂಡೊಯ್ಯಲು ಭಾನುವಾರ ಸಂಜೆವರೆಗೂ ಪಾಸ್ ಸಿಕ್ಕಿರಲಿಲ್ಲ. ಕೊರೊನಾ ಪರೀಕ್ಷೆ ನಡೆಸಿದ್ದು, ವರದಿ ನೆಗೆಟಿವ್ ಬಂದಿದ್ದರೂ ಎರಡೂ ರಾಜ್ಯಗಳ ನಿಯೋಜಿತ ನೋಡೆಲ್ ಅಧಿಕಾರಿಗಳ ಮಟ್ಟದಲ್ಲಿ ಸಂವಹನ ಕೊರತೆಯಿಂದ ಪಾಸ್ ಸಿಗುವುದು ತಡವಾಗಿದೆ ಎಂದು ಸಿಪಿಐ ಡಿ. ಯೋಗೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.