ಬುಧವಾರ, ಮೇ 18, 2022
29 °C

ಕಿಕ್ಕೇರಿ: ಬೇಟೆ ಹೊತ್ತೊಯ್ದ ಚಿರತೆ ಹಳ್ಳಕ್ಕೆ ಬಿದ್ದು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಿಕ್ಕೇರಿ: ಸಮೀಪದ ಅಣೆಚಾಕನಹಳ್ಳಿ ಗ್ರಾಮಕ್ಕೆ ಬೇಟೆಗಾಗಿ ಗುರುವಾರ ತಡರಾತ್ರಿ ನುಗ್ಗಿದ ಸುಮಾರು 8 ತಿಂಗಳ ಮರಿ ಚಿರತೆ ಮೃತಪಟ್ಟಿದೆ.

ಬೇಟೆ ಅರಸಿ ಗ್ರಾಮಕ್ಕೆ ನುಗ್ಗಿದ ಚಿರತೆಯನ್ನು ಕಂಡು ಬೀದಿನಾಯಿಗಳು ಬೊಗಳಲು ಆರಂಭಿಸಿವೆ. ಸದ್ದು ತೀವ್ರಗೊಂಡಾಗ ಗ್ರಾಮದ ಹೊರವಲಯದಲ್ಲಿರುವ ಗೌರಮ್ಮ ಎಂಬವರ ಮನೆಯ ಕಡೆಗೆ ನುಗ್ಗಿದೆ. ಮನೆ ಮುಂಭಾಗ ಕಟ್ಟಿದ್ದ ನಾಯಿ ಕಂಡು ದಾಳಿ ಮಾಡಿದೆ.

ನಾಯಿಯನ್ನು ಕೊಂದು ಹೊತ್ತುಕೊಂಡು ಹೋಗಲು ಯತ್ನಿಸಿ ಮನೆಯ ಪಕ್ಕದಲ್ಲಿರುವ ಹಳ್ಳದ ಕಡೆಗೆ ಓಡಿದೆ. ಹಳ್ಳದ ಪಕ್ಕ ಇದ್ದ ದಿಣ್ಣೆ ಹತ್ತಲು ಸಾಧ್ಯವಾಗದೆ ಹಳ್ಳಕ್ಕೆ ಬಿದ್ದು ಪ್ರಾಣಬಿಟ್ಟಿದೆ.

ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು, ಪಶು ಆಸ್ಪತ್ರೆ ಸಿಬ್ಬಂದಿ ಸ್ಥಳಕ್ಕೆ ಬಂದು ಮರಣೋತ್ತರ ಪರೀಕ್ಷೆ ನಡೆಸಿದರು.

ಈ ಪ್ರದೇಶದಲ್ಲಿ ಹಲವಾರು ಚಿರತೆಗಳಿದ್ದು, ಅವುಗಳನ್ನು ಸೆರೆ ಹಿಡಿಯಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರಿಗೆ ಮನವರಿಕೆ ಮಾಡಿದರು.

ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ವಲಯ ಅರಣ್ಯಾಧಿಕಾರಿ ಗಂಗಾಧರ್, ಉಪವಲಯ ಅರಣ್ಯಾಧಿಕಾರಿ ಭರತ್, ರಾಘವೇಂದ್ರ, ಶ್ರೀಕಾಂತ್, ರಮೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು