ಮಂಡ್ಯ: ಲಕ್ಷ್ಮೀವೆಂಕಟೇಶ್ವರ ಪ್ರೊಡಕ್ಷನ್ ಬ್ಯಾನರ್ಡಿ ‘ಬೆಳಕು ನಮ್ಮ ಬದುಕು’ ಸಿನಿಮಾ ಟೈಟಲ್ ಅನ್ನು ಸಿನಿಮಾ ತಂಡವು ಶುಕ್ರವಾರ ಇಲ್ಲಿನ ಪ್ರೆಸ್ಕ್ಲಬ್ನಲ್ಲಿ ಬಿಡುಗಡೆ ಮಾಡಿತು.

‘ಎಂ.ಎಸ್.ರವೀಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇದೊಂದು ಕಲಾತ್ಮಕ ಮತ್ತು ಕಮರ್ಷಿಯಲ್ ಸಿನಿಮಾವಾಗಿದೆ’ ಎಂದು ನಿರ್ಮಾಪಕಿ ಶ್ವೇತಾ ಸಿ.ಬೆಳವಾಡಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

‘ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ ಸೇರಿದಂತೆ ಇತರೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾ ಮೂಲಕ ಹಲವು ಪ್ರತಿಭೆಗಳು ಬೆಳ್ಳಿ ತೆರೆಯಲ್ಲಿ ಮಿಂಚಲಿದ್ದಾರೆ. ಜೊತೆಗೆ ಅತ್ಯುತ್ತಮವಾಗಿ ಚಿತ್ರ ನಿರ್ಮಿಸಬೇಕೆಂಬ ಹಂಬಲದಿಂದಲೇ ಸಿನಿಮಾ ಟೈಟಲ್ ಬಿಡುಗಡೆ ಮಾಡಲು ಮುಂದಾಗಿದ್ದು, ಎಲ್ಲರೂ ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು.

ನಿರ್ದೇಶಕ ಎಂ.ಎಸ್.ರವೀಂದ್ರ ಮಾತನಾಡಿ, ‘ಕುಟುಂಬದವರೆಲ್ಲರೂ ಕುಳಿತು ನೋಡಬಹುದಾದ ಚಿತ್ರ ಇದಾಗಿದೆ ’ ಎಂದರು.

ಚಿತ್ರತಂಡದ ಜಗನ್ನಾಥ ಶೆಟ್ಟಿ, ನಿವೇದಿತಾ, ಉಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.