ಮಳವಳ್ಳಿ: ಪ್ಯಾಲಸ್ಟೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಯುದ್ದವನ್ನು ಖಂಡಿಸಿ ಸಿಪಿಐ(ಎಂ) ಕಾರ್ಯಕರ್ತರು ಪಟ್ಟಣ ಅನಂತರಾಂ ವೃತ್ತದ ಬಳಿ ಗುರುವಾರ ಪ್ರತಿಭಟನೆ ನಡೆಸಿ ಯುದ್ಧ ನಿಲ್ಲಿಸಿ ಶಾಂತಿಯನ್ನು ಕಾಪಾಡಬೇಕು ಎಂದು ಆಗ್ರಹಿಸಿರು.

ಸಿಪಿಐ(ಎಂ) ರಾಜ್ಯ ಸಮಿತಿಯ ಸದಸ್ಯೆ ದೇವಿ ಮಾತನಾಡಿ, ‘ಇಸ್ರೇಲ್ ಅಮೆರಿಕದ ಕುಮಕ್ಕಿನಿಂದ ಪ್ಯಾಲಸ್ಟೀನ್ ಮೇಲೆ ದಾಳಿ ನಡೆಸುವುದರ ಜೊತೆಗೆ ಇರಾನ್ ಮೇಲೂ ಸಹ ಯುದ್ಧ ಮಾಡಲು ಮುಂದಾಗಿ ಸಾವಿರಾರು ಅಮಾಯಕ ಮಕ್ಕಳು, ಮಹಿಳೆಯರು ಹಾಗೂ ಪತ್ರಕರ್ತರನ್ನು ಅಮಾನುಷವಾಗಿ ಹತ್ಯೆ ಮಾಡುತ್ತಿದೆ. ಪ್ರಧಾನಿನ ನರೇಂದ್ರ ಮೋದಿ ಅವರು ಅಲಿಪ್ತ ನೀತಿಯ ಭಾಗವಾಗಿ ಪ್ಯಾಲಸ್ಟೀನ್ ಅನ್ನು ಬೆಂಬಲಿಸಬೇಕು’ ಎಂದು ಒತ್ತಾಯಿಸಿದರು.

ಇಸ್ರೇಲ್ ನ ಅಧ್ಯಕ್ಷ ಬೆಂಜಮೀನ್ ನೇತಾ ನ್ಯಾಹೂ ಅಧಿಕಾರಕ್ಕೆ ಬಂದ ನಂತರ ಉಗ್ರ ಬಲಪಂಥೀಯ ವಾದವನ್ನು ಅನುಸರಿಸುತ್ತಿದೆ. ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ವಿರುದ್ಧ ಜಗತ್ತಿನ ರಾಷ್ಟ್ರಗಳು ಮತ ಚಲಾಯಿಸಬೇಕೆಂದಾಗ 149 ದೇಶಗಳು ಇಸ್ರೇಲ್ ವಿರುದ್ಧ ಮತ ಚಲಾಯಿಸಿ ಪ್ಯಾಲಸ್ಟೀನ್ ಪರವಾಗಿ ನಿಂತಾಗ ಭಾರತದ ನರೇಂದ್ರ ಮೋದಿ ಮತದಾನದ ವಿರುದ್ಧ ಹೊರಗೆ ಉಳಿದಿರುವುದು ಅಲಿಪ್ತ ನೀತಿಗೆ ಮತ್ತು ಸೌಹಾರ್ದಕ್ಕೆ ಶಾಂತಿಗೆ ಬಗೆದ ದ್ರೋಹವಾಗಿದಂತಾಗಿದೆ ಎಂದು ಹೇಳಿದರು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಕಾರ್ಯದರ್ಶಿ ಮಂಡಳಿ ಸದಸ್ಯ ಎನ್.ಎಲ್.ಭರತರಾಜ್, ಮುಖಂಡರಾದ ಸುಶೀಲಾ, ಆನಂದ್. ಎನ್.ಲಿಂಗರಾಜಮೂರ್ತಿ, ಮಹದೇವಮ್ಮ, ಶಿವಕುಮಾರ್, ಜಯಶೀಲ, ಗುರುಸ್ವಾಮಿ, ಬಸವರಾಜು ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.