ಮಳವಳ್ಳಿ: ತಾಲ್ಲೂಕಿನ ಕಿರುಗಾವಲು ಹೋಬಳಿಯ ದೇವಿಪುರ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿದ್ದ ಮೂರು ಮೇಕೆಗಳು ಹಾಗೂ ಎರಡು ಕುರಿಗಳನ್ನು ಚಿರತೆ ಬುಧವಾರ ದಾಳಿ ಮಾಡಿ ಕೊಂದು ಹಾಕಿದೆ.

ಗ್ರಾಮದ ಬಿ.ಚೌಡಯ್ಯ ಎಂಬುವವರ ಪುತ್ರ ರೈತ ಶೇಖರ್ ಅವರು ಕೊಟ್ಟಿಗೆ ಮೇಕೆ, ಕುರಿಯನ್ನು ಕಟ್ಟಿದ್ದರು. ಚಿರತೆ ₹ 1 ಲಕ್ಷ ಮೌಲ್ಯದ ಮೂರು ಮೇಕೆ ಮತ್ತು ಎರಡು ಕುರಿಗಳನ್ನು ಕೊಂದು ತಿಂದು ಹಾಕಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾ.ಪಂ.ಉಪಾಧ್ಯಕ್ಷ ಡಿ.ಬಿ.ಬಸವರಾಜು ಮಾತನಾಡಿ, ತಳಗವಾದಿ, ದೇವಿಪುರ, ಮಾದಹಳ್ಳಿ, ಹುಲ್ಲೇಗಾಲದಲ್ಲಿ ಕಳೆದ ದಿನಗಳಿಂದ ನಿರಂತರವಾಗಿ ಚಿರತೆಗಳು ದಾಳಿ ಮಾಡಿ ರೈತರ ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಿವೆ. ಇದ್ದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದ್ದು, ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಮುಂದಾಗಬೇಕು. ಅಲ್ಲದೇ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.