ಮದ್ದೂರು: ತಾಲ್ಲೂಕಿನ ಕೆಸ್ತೂರು ಬಳಿಯ ಅಡಗನಹಳ್ಳಿ ಗ್ರಾಮದಲ್ಲಿ ಗುರುವಾರ ಮಂಚಮ್ಮ ದೇವಿಯ ನೂತನ ವಿಗ್ರಹ ಪ್ರತಿಷ್ಠಾಪನ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಅಂಕುರಾರ್ಪಣೆ, ಸ್ವಸ್ತಿವಾಚನ, ಧ್ವಜಾರೋಹಣ ಮತ್ತು ರಾತ್ರಿ 8 ಗಂಟೆಗೆ ಶುದ್ಧ ಪುಣ್ಯಾಹ, ಮಹಾಗಣಪತಿ ಪೂಜೆ, ಉಮಾಮಹೇಶ್ವರ, ವರುಣ, ಕಮಲವಾಸ್ತು ಮೃತ್ಯುಂಜಯ ಪೂಜೆ, ನವಗ್ರಹ ಪೂಜೆ, ಯಜ್ಞ ನಡೆಯಿತು.

ಗುರುವಾರ ಬೆಳಿಗ್ಗೆ ಗಂಗಾಪೂಜೆಗೆ, ಆಲಯ ಪ್ರವೇಶ, ವಿಗ್ರಹ ಶುದ್ಧಿ ನಡೆಯಿತು. ನಂತರ ಮಂಚಮ್ಮದೇವಿಯ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ, ಗೋಪುರ ಕಳಶ ಸ್ಥಾಪನೆ, ಗಣಪತಿ ವಿಗ್ರಹ, ಮಾಸ್ತಮ್ಮ ಹಸ್ತರೇಖೆ ಪ್ರತಿಷ್ಠಾಪನೆ ನಂತರ ಅಭಿಷೇಕ, ಅಷ್ಟೋತ್ತರ ಹೂವಿನ ಅಲಂಕಾರ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಮಧ್ಯಾಹ್ನ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಶಾಸಕ ಕೆ.ಎಂ.ಉದಯ್, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸೇರಿದಂತೆ ಹಲವು ಗಣ್ಯರು ದೇವರ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕರಾದ ಶಿವರಾಮು, ಕುಮಾರಸ್ವಾಮಿ, ಯಜಮಾನರಾದ ಮಹೇಶ್, ಮಂಚಣ್ಣ, ಮಹದೇವ, ಕೃಷ್ಣ, ನಂದೀಶ, ಮಲ್ಲೇಶ್, ಗಿರೀಶ್, ಪ್ರಕಾಶ್, ಸಂತೋಷ, ವಿನೋದ್ ರಾಜ್, ಧನಂಜಯ, ಮೃತ್ಯುಂಜಯ ಹರಿಪ್ರಸಾದ್ ನೇತೃತ್ವ ವಹಿಸಿದ್ದರು. ಅಡುಗನಹಳ್ಳಿ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಆಗಮಿಸಿ ದೇವರ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.