ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ: ಅನಾರೋಗ್ಯದ ನಡುವೆಯೂ ಶೇ 87 ಅಂಕ ಗಳಿಸಿದ ಬಾಲಕ

Published 10 ಏಪ್ರಿಲ್ 2024, 15:32 IST
Last Updated 10 ಏಪ್ರಿಲ್ 2024, 15:32 IST
ಅಕ್ಷರ ಗಾತ್ರ

ಮಂಡ್ಯ: ಕೈ ಮತ್ತು ಕಾಲಿನ ಕೆಳಭಾಗದ ಸ್ನಾಯುಗಳಲ್ಲಿ ನಿಶ್ಯಕ್ತಿ ಮೂಡಿಸಿ, ಕ್ರಮೇಣ ದೇಹವಿಡೀ ಹಬ್ಬಿ, ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರುವ ಗಂಭೀರ ಕಾಯಿಲೆ (ಡಿಸ್ಟಲ್‌ ಮಸ್ಕ್ಯುಲರ್ ಡಿಸ್ಟ್ರೊಫಿ)ಯಿಂದ ಬಳಲುತ್ತಿರುವ, ನಗರದ ಸೇಂಟ್ ಜಾನ್ಸ್ ಸಂಯುಕ್ತ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ದೈವಿಕ್ ಶೇಕಡಾ 87 ರಷ್ಟು ಅಂಕ ಗಳಿಸಿದ್ದಾನೆ.

ಕಳೆದ ಜನವರಿ-ಫೆಬ್ರವರಿಯಲ್ಲಿ ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿ, ಸಾವು-ಬದುಕಿನೊಂದಿಗೆ ಹೋರಾಡಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಆತ ಪರೀಕ್ಷೆ ಬರೆದಿದ್ದ ಎಂದು ವಿದ್ಯಾರ್ಥಿಯ ತಂದೆ, ಮಂಡ್ಯ ನಗರದ ಸ್ವರ್ಣಸಂದ್ರದ ನಿವಾಸಿ ಶ್ರೀನಿವಾಸ್‌ ತಿಳಿಸಿದ್ದಾರೆ. ಅವರಿಗೆ ನಗರದಲ್ಲಿ ಸ್ಟೇಷನರಿ ಅಂಗಡಿ ಇದೆ.

‘ದೈವಿಕ್‌ ನನ್ನ ಮಗನೆಂದು ಹೇಳಲು ಹೆಮ್ಮೆ ಎನಿಸುತ್ತದೆ. ಆರೋಗ್ಯ ಸಮಸ್ಯೆ ಲೆಕ್ಕಿಸದೇ ಉತ್ತಮ ಅಂಕ ಗಳಿಸಿ ಇತರರಿಗೂ ಪ್ರೇರಣೆಯಾಗಿರುವುದು ಖುಷಿ ತಂದಿದೆ’ ಎಂದು ಅವರು ತಿಳಿಸಿದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT