ಮಂಡ್ಯ: ‘ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಲಂಚ ತೆಗೆದುಕೊಳ್ಳುವುದು, ಕೊಡುವುದು ತಪ್ಪು ಎಂಬ ಬಗ್ಗೆ ಪರಿಣಾಮಕಾರಿ ಜಾಗೃತಿ ನಡೆಯುತ್ತಿಲ್ಲ. ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಮಾಡಬೇಕಿರುವುದರಿಂದ ಲಂಚ ಏಕೆ ಕೊಡಬೇಕು ಎನ್ನುವ ಭಾವನೆ ಸಾರ್ವಜನಿಕರಲ್ಲಿ ಬರಬೇಕು ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಚ್.ಎಂ. ಶಿವಕುಮಾರ್ ಅಭಿಪ್ರಾಯ ಪಟ್ಟರು.

ನಗರದ ಕರ್ನಾಟಕ ಸಂಘದ ಕೆ.ವಿ.ಎಸ್ ಭವನದಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ ಆಫ್ ಇಂಡಿಯಾ ವತಿಯಿಂದ ಶನಿವಾರ ನಡೆದ ಸಂಘಟನೆಯ ಜಿಲ್ಲಾ ಘಟಕ ಉದ್ಘಾಟನೆ ಮತ್ತು ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದ 25 ವರ್ಷ ಲಂಚ ಎನ್ನುವುದು ಅಷ್ಟಾಗಿ ಇರಲಿಲ್ಲ. 1970–80ರ ನಂತರ ಮೊದಲು ಲಂಚ ಕೊಟ್ಟು ಆನಂತರ ಕೆಲಸ ಮಾಡಿಸಿಕೊಳ್ಳುವ ಹಾಗೆ ಆಗಿದೆ. ಲಂಚ ಕೊಡಿ ಎನ್ನುವ ನಾಮಫಲಕ ಮಾತ್ರ ಹಾಕಿಲ್ಲ ಅಷ್ಟೇ ಎಂದು ವಿಷಾದಿಸಿದರು.

ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ‘ಲಂಚ ನಿರ್ಮೂಲನೆಗೆ ನಿಂತಿರುವ ಈ ಸಂಘಟನೆಯ ಕೆಲಸ ಉತ್ತಮವಾಗಿ ಸಾಗಲಿ. ಭ್ರಷ್ಟಾಚಾರ ಎಂಬುದು ದೇಶದಲ್ಲಿ ಎಲ್ಲ ರಂಗಗಳಲ್ಲಿ ವ್ಯಾಪಿಸಿದೆ. ಅದಕ್ಕೆ ಕಡಿವಾಣ ಹಾಕಲು ಹೊರಟಿರುವುದು ಶ್ಲಾಘನೀಯ’ ಎಂದರು.

ಕಾರ್ಯಕ್ರಮದಲ್ಲಿ ಜಯದೇವ ಆಸ್ಪತ್ರೆಯ ಚಿಕ್ಕತಿಮ್ಮಯ್ಯ, ಮೈಸೂರು ಸಿಡಿ ಆಸ್ಪತ್ರೆಯ ನಿವೃತ್ತ ಡಾ.ಎಚ್.ಎಂ.ವಿರೂಪಾಕ್ಷ, ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಪ್ರಭಾಕರ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಜಿನಿರಾಜ್, ಉಪಾಧ್ಯಕ್ಷೆ ಶೈಲಾ ವಿ.ಕುಂಬಾರ, ಕಾರ್ಯಾಧ್ಯಕ್ಷ ಸಾಬರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ದಯಾನಂದ, ಕಾರ್ಯದರ್ಶಿ ಕೃಷ್ಣಪ್ಪ, ವಿಭಾಗೀಯ ಅಧ್ಯಕ್ಷ ಎಸ್.ಗುರುಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.