ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಮರಗಳ ಕೊಂಬೆ ಕಟಾವು: ಆಕ್ರೋಶ

ಮರಗಳ ಕೊಂಬೆ ಕಟಾವು: ಆಕ್ರೋಶ
Published : 4 ಸೆಪ್ಟೆಂಬರ್ 2024, 15:42 IST
Last Updated : 4 ಸೆಪ್ಟೆಂಬರ್ 2024, 15:42 IST
ಫಾಲೋ ಮಾಡಿ
Comments

ಮಂಡ್ಯ: ನಗರದೆಲ್ಲೆಡೆ ಕೆಲವು ಭಾಗಗಳಲ್ಲಿ ಮರಗಳ ಎಲ್ಲಾ ಕೊಂಬೆಗಳನ್ನು ಕಡಿದು ಹನನ ಮಾಡಲಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ವಿದ್ಯಾನಗರದ ಪಾರ್ಕಿನಲ್ಲಿ ನಿರಂತರವಾಗಿ ಮರಗಳ ಕೊಂಬೆ ಕಡಿದು ಹನನ ಮಾಡುತ್ತಿದ್ದಾರೆ ಇದು ನಿಲ್ಲಬೇಕೆಂದು ಪರಿಸರ ಪ್ರೇಮಿ ಸಿ.ಪಿ.ವಿದ್ಯಾಶಂಕರ್‌ ಸೇರಿದಂತೆ ನಿವಾಸಿಗಳು ಮತ್ತು ವಾಯು ವಿಹಾರಿಗಳು ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕಿಡಿಕಾರಿದರು.

ಉದ್ಯಾನಕ್ಕೆ ಮೂಲ ಸೌಲಭ್ಯವಿಲ್ಲದೇ ವಂಚಿತವಾಗಿದೆ. ಮರಗಳ ಹನನವಾದರೆ ವಾಯುವಿಹಾರಿಗೆ ತೊಂದರೆ ಆಗುತ್ತದೆ. ಉದ್ಯಾನವನದ ಸೌಂದರ್ಯ ಹಾಳುಗುತ್ತದೆ. ಎಗ್ಗಿಲ್ಲದೆ ಮರಗಳನ್ನು ಕಡೆಯುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಇಲ್ಲವಾದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪರಿಸರ ಪ್ರೇಮಿಗಳು ಪ್ರಜಾವಾಣಿ ಜೊತೆ ಮಾತನಾಡಿ ಎಚ್ಚರಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT