ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ| ರಂಜಾನ್‌ ರಜೆಗೆ ಬಂದಿದ್ದ ಐವರು ನಾಲೆಯಲ್ಲಿ ಮುಳುಗಿ ಸಾವು

Published 25 ಏಪ್ರಿಲ್ 2023, 11:14 IST
Last Updated 25 ಏಪ್ರಿಲ್ 2023, 11:14 IST
ಅಕ್ಷರ ಗಾತ್ರ

ಮಂಡ್ಯ: ರಂಜಾನ್‌ ರಜೆಗೆಂದು ಸಂಬಂಧಿಕರ ಮನೆಗೆ ಬಂದಿದ್ದ 2 ಕುಟುಂಬಗಳ ಐವರು ವಿಶ್ವೇಶ್ವರಯ್ಯ ನಾಲೆಯಲ್ಲಿ ಆಟವಾಡುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲ್ಲೂಕಿನ ದೊಡ್ಡಕೊತ್ತಗೆರೆ ಗ್ರಾಮದ ಬಳಿ ಮಂಗಳವಾರ ನಡೆದಿದೆ.

ಬೆಂಗಳೂರಿನ ನೀಲಸಂದ್ರ ಬಡಾವಣೆಯ ಅನೀಷಾ ಬೇಗಂ(34), ಅವರ ಮಗಳು ಮೆಹತಾಬ್ (10), ಅಮಾನುಲ್ಲಾ ಎಂಬುವವರ ಮಕ್ಕಳಾದ ತಸ್ಮಿಯಾ (22), ಅಫೀಕಾ (22), ಅಶ್ರಕ್ (28) ಮೃತಪಟ್ಟಿದ್ದರೆ.

ರಂಜಾನ್‌ ಆಚರಣೆ ಮುಗಿನ ನಂತರ ತಾಲ್ಲೂಕಿನ ಹಲ್ಲೇಗೆರೆಯ ಸಂಬಂಧಿಕರ ಮನೆಗೆ ಬಂದಿದ್ದರು. ದೊಡ್ಡಕೊತ್ತಗೆರೆ ಬಳಿಯ ವಿಶ್ವೇಶ್ವರಯ್ಯ ನಾಲೆ ಬಳಿ ಆಟವಾಡುತ್ತಿದ್ದಾಗ 10 ವರ್ಷದ ಮಗು ಮೆಹತಾಬ್‌ ನೀರಿನ ಸುಳಿಗೆ ಸಿಲುಕಿ ಮುಳುಗಿದೆ. ಮಗುವನ್ನು ರಕ್ಷಿಸಲು ತೆರಳಿದ ಇತರರೂ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಬಂದ ಬಸರಾಳು ಠಾಣೆ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಮೂರು ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ಇನ್ನೂ ಎರಡು ಮೃತದೇಹಗಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ನೀರಿನ ಹರಿವಿನ ವೇಗ ಹೆಚ್ಚಾಗಿದ್ದು ಮೃತದೇಹಗಳು ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸರಾಳು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT