ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಗಣತಿ ವರದಿ ಪರಿಪೂರ್ಣವಲ್ಲ: ಎಚ್‌.ಡಿ. ಕುಮಾರಸ್ವಾಮಿ ಟೀಕೆ

Published 22 ನವೆಂಬರ್ 2023, 15:43 IST
Last Updated 22 ನವೆಂಬರ್ 2023, 15:43 IST
ಅಕ್ಷರ ಗಾತ್ರ

ಮಂಡ್ಯ: ‘ಕಾಂಗ್ರೆಸ್‌ ರಾಷ್ಟ್ರೀಯ ನಾಯಕರ ಭಾವನೆಗಳಿಗೆ ಸ್ಪಂದಿಸಲು ಜಾತಿ ಗಣತಿ ವರದಿ ಪಡೆಯಲು ನಿರ್ಧರಿಸಿದ್ದಾರೆ. ಈಗ ಸಿದ್ಧಗೊಂಡಿರುವ ಗಣತಿ ಸಂಪೂರ್ಣವಲ್ಲ; ಬೇಕಾದ ರೀತಿಯಲ್ಲಿ ಜಾತಿಗಣತಿ ನಡೆಸಿರುವುದು ಜಗಜ್ಜಾಹೀರಾಗಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

ಇಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ‘ಕಾಂತರಾಜು ವರದಿ ಮೂಲಪ್ರತಿ ಕಳವಾದ ಮಾಹಿತಿ ಇದೆ. ಆ ವರದಿಯನ್ನು ಕುಮಾರಸ್ವಾಮಿ ತಿರಸ್ಕರಿಸಿದ್ದರು ಎಂದು ಆರೋಪಿಸಿದ್ದರು. ನನ್ನ ಕಾಲದಲ್ಲಿ ಸಿದ್ಧವಾಗಿದ್ದರೆ ಇವರು ಅಧಿಕಾರ ಹಿಡಿದ 6 ತಿಂಗಳಲ್ಲಿ ಏಕೆ ಒಪ್ಪಿಗೆ ಕೊಡಲಿಲ್ಲ’ ಎಂದು ಪ್ರಶ್ನಿಸಿದರು.

‘ಕಾಂತರಾಜು ಸಮಿತಿ ರಚನೆಯಾಗಿ 10 ವರ್ಷ ಕಳೆದಿದೆ. ಈ ಅವಧಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮನೆಯಲ್ಲಿ ಕುಳಿತು ವರದಿ ಬರೆದರೋ, ಆಗಿನ ಮುಖ್ಯಮಂತ್ರಿ ಬರೆಸಿದರೋ ಗೊತ್ತಿಲ್ಲ. ಆಗಿನ ಸದಸ್ಯ ಕಾರ್ಯದರ್ಶಿ ವರದಿಗೆ ಸಹಿ ಹಾಕದಿರಲು ಕಾರಣವೇನು? ಸಮಾಜ ಒಡೆಯುವುದೇ ಕಾಂಗ್ರೆಸ್‌ನ ಉದ್ದೇಶ. ಅವರಿಗೆ ಅಧಿಕಾರ ಇದೆ, ಸತ್ಯಾಂಶಗಳ ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆಹರಿಸಬೇಕು. ಜಾತಿಯ ಕಾರಣಕ್ಕೆ ನಾನು ಗಣತಿ ವರದಿಯನ್ನು ವಿರೋಧಿಸಿಲ್ಲ’ ಎಂದರು.

‘ಬಿಜೆಪಿ ಹೇಳಿದರೆ ಕುಮಾರಸ್ವಾಮಿ ಚಡ್ಡಿನೂ ಹಾಕುತ್ತಾರೆ, ದತ್ತ ಮಾಲೆನೂ ಧರಿಸುತ್ತಾರೆ’ ಎಂಬ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಹೇಳಿದರೆ ಇವರು ಏನು ಹಾಕುತ್ತಾರೆ ಎಂಬುದನ್ನು ಮೊದಲು ಹೇಳಲಿ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT