‘ಇತಿಹಾಸವನ್ನು ಉಳಿಸಲು ದಾಖಲೆಗಳು ಬಹಳ
‘ದಾಖಲೆಗಳು ಇತಿಹಾಸದ ಮೂಲಾಧಾರ’ ಮುಖ್ಯವಾಗಿದ್ದು ದಾಖಲೆಗಳು ಇಲ್ಲವಾದರೆ ಇತಿಹಾಸವನ್ನು ತಿಳಿಯಲು ಸಾಧ್ಯವಾಗುವುದಿಲ್ಲ’ ಎಂದು ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ. ಶಿವಚಿತ್ತಪ್ಪ ಹೇಳಿದರು. ಭಾರತ ದೇಶದ ಸಂಸ್ಕೃತಿ ಇತಿಹಾಸ ಸಂಪ್ರದಾಯ ಬಹಳ ವಿಶಿಷ್ಟವಾದದ್ದು ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ಸಂಸ್ಕೃತಿಯಲ್ಲಿ ಮೈಸೂರಿನ ಸಂಸ್ಕೃತಿ ಪ್ರಸಿದ್ಧವಾದದ್ದು. ಆದರೆ ಪ್ರಸ್ತುತ ಪೀಳಿಗೆಗಳು ತಮ್ಮ ದೇಶದ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿ ಆಚಾರ-ವಿಚಾರದ ಕಡೆಗೆ ಗಮನ ಗಮನ ಹರಿಸುತ್ತಿರುವುದು ನಿಜಕ್ಕೂ ವಿಪರ್ಯಾಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.