ಮಂಡ್ಯ: ಬೆಂಗಳೂರಿನಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆತೆರಳಬೇಕಿರುವುದರಿಂದ ವಿವಿಧಶಾಲೆ ವಿದ್ಯಾರ್ಥಿ ಗಳಪಥಸಂಚಲನಮೊಟಕು ಗೊಳಿ ಸುವಂತೆ ಸಚಿವ ಆರ್.ಅಶೋಕ ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರಿಗೆ ಸೂಚಿಸಿದರು.

ಬೇಸರಗೊಂಡ ವಿದ್ಯಾರ್ಥಿಗಳು, ‘15 ದಿನಗಳಿಂದ ತಾಲೀಮು ನಡೆಸಿದ್ದೇವೆ. ಆದರೆ, ಈಗ ಅವಕಾಶ ನಿರಾಕರಿ ಸಿದ್ದಾರೆ. ನಮ್ಮ ಶ್ರಮಕ್ಕೆ ಬೆಲೆ ಇಲ್ಲವೇ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು, ಪೊಲೀಸರು ಸಮಾಧಾನಪಡಿಸಿದರೂ ವಿದ್ಯಾರ್ಥಿಗಳು ಕೇಳಲಿಲ್ಲ. ಕೊನೆಗೆ ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಪಥ ಸಂಚಲನದಲ್ಲಿ ಭಾಗವಹಿಸಲು ಅವಕಾಶ ನೀಡಿದರು. ಅಷ್ಟರಲ್ಲಿ ಕೆಲವು ಶಾಲೆಗಳ ವಿದ್ಯಾರ್ಥಿಗಳು ಹೊರಟು ಹೋಗಿದ್ದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಮಾತನಾಡಿ, ‘ಗೌರವ ವಂದನೆ ಸ್ವೀಕರಿಸಲು ಸಮಯ ಇಲ್ಲದವರು ಧ್ವಜಾರೋಹಣಕ್ಕೆ ಏಕೆ ಬರಬೇಕು. ಮಕ್ಕಳಿಗೆ ಅಗೌರವ ಅಷ್ಟೇ ಅಲ್ಲ. ಸ್ವಾತಂತ್ರೋತ್ಸವಕ್ಕೆ ಹಾಗೂ ಜಿಲ್ಲೆಗೆ ಮಾಡಿದ ಅಪಮಾನವಾಗಿದೆ’ ಎಂದು ದೂರಿದರು.

ಮಕ್ಕಳಲ್ಲಿ ವಿನಂತಿ ಮಾಡಿದ್ದೇನೆ:ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬೆಂಗ ಳೂರಿನಲ್ಲೂ ಧ್ವಜಾರೋಹಣ ನೆರವೇರಿ ಸಬೇಕಾಗಿದೆ. ಹಾಗಾಗಿ ಕೂಡಲೇ ತೆರಳಬೇಕಿದೆ. ಅದಕ್ಕಾಗಿ ಮಕ್ಕಳಲ್ಲಿ ವಿನಂತಿ ಮಾಡಿದ್ದೇನೆ’ ಎಂದರು.

‘ಅಭಿವೃದ್ಧಿ ವಂಚಿತ ಜಿಲ್ಲೆಯಾಗಿರುವ ಮಂಡ್ಯಕ್ಕೆ ಅಭಿವೃದ್ಧಿಯ ಸ್ವಾತಂತ್ರ್ಯ ಬೇಕಿದೆ’ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

‘ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಮಾಡುವುದು ಪ್ರಮುಖವಾಗಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದಂತೆ ಮಂಡ್ಯ ಜಿಲ್ಲೆಯು ಅಭಿವೃದ್ಧಿ ವಂಚಿತವಾಗಿ ನಲುಗುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ನಾಲೆಗಳ ಅಭಿವೃದ್ಧಿ, ಕುಡಿಯುವ ನೀರು, ಆಸ್ಪತ್ರೆಗಳ ಅಭಿವೃದ್ಧಿಗೆ ಶ್ರಮ ವಹಿಸಲಾಗುತ್ತಿದೆ. ಹಿಂದೆಯೂ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.