ಸೋಮವಾರ, ಸೆಪ್ಟೆಂಬರ್ 27, 2021
24 °C

ಪಾಂಡವಪುರದಲ್ಲಿ ಭಾರಿ ಶಬ್ದ, ಬೆಚ್ಚಿಬಿದ್ದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ತಾಲ್ಲೂಕಿನ ವಿವಿಧೆಡೆ ಗುರುವಾರ ಮಧ್ಯಾಹ್ನ ಕೇಳಿ ಬಂದ ಭಾರಿ ಶಬ್ದದಿಂದ ಭೂಕಂಪನದ ಅನುಭವವಾಗಿ ಜನ ಮನೆಯಿಂದ ಹೊರಗೆ ಓಡಿ ಬಂದರು.

ಪಟ್ಟಣ ಸೇರಿದಂತೆ ಚಂದ್ರೆ, ಕೆ.ಬೆಟ್ಟಹಳ್ಳಿ, ಬೇಬಿಬೆಟ್ಟದ ಆಸುಪಾಸಿನ ಹೊನಗಾನಹಳ್ಳಿ, ರಾಗಿ ಮುದ್ದನಹಳ್ಳಿ, ಶಿಂಡ ಭೋಗನಹಳ್ಳಿ, ಚಿನಕುರಳಿ, ಬೆಟ್ಟಹಳ್ಳಿ, ಚಾಗಶೆಟ್ಟಹಳ್ಳಿಯಲ್ಲಿ ಭಾರಿ ಶಬ್ದ ಕೇಳಿ ಬಂತು.

‘ಭಾರಿ ಶಬ್ದದಿಂದಾಗಿ ಮನೆಗಳ ಬಾಗಿಲು, ಕಿಟಕಿ ನಡುಗಿ ದವು. ಪಾತ್ರೆ ಸೇರಿ ಮನೆ ಬಳಕೆ ವಸ್ತುಗಳು ಅಲುಗಾ ಡಿದವು’ ಎಂದು ಗ್ರಾಮಸ್ಥರು ತಿಳಿಸಿದರು.

2018ರಲ್ಲೂ ಇದೇ ರೀತಿ ಭಾರಿ ಶಬ್ದ ಕೇಳಿ ಬಂದಿತ್ತು. ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಯ ಸ್ಫೋಟದಿಂದ ಶಬ್ದ ಬಂದಿದೆ ಎನ್ನಲಾಗಿತ್ತು. ರಾಜ್ಯ ನೈಸರ್ಗಿಕ ವಿಕೋಪ ಮತ್ತು ಉಸ್ತು ವಾರಿ ಸಂಸ್ಥೆ ಪರಿಶೀಲನೆ ನಡೆಸಿತ್ತು.

‘ಈಗಲೂ ಕಲ್ಲು ಗಣಿ ಸ್ಫೋಟದಿಂದಲೇ ಶಬ್ದ ಬಂದಿದೆ’ ಎಂದು ಸಾರ್ವಜನಿಕರು ಶಂಕಿಸಿದ್ದಾರೆ. ‘ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ಕಲ್ಲು ಸ್ಫೋಟ ನಡೆಯುತ್ತಿಲ್ಲ’  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು