ಬುಧವಾರ, ಆಗಸ್ಟ್ 4, 2021
22 °C

ಮಂಡ್ಯ ಪ್ರೆಸ್‌ಕ್ಲಬ್‌ ಸೀಲ್‌ಡೌನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಶ್ರೀರಂಗಪಟ್ಟಣದ ಪತ್ರಕರ್ತರೊಬ್ಬರಿಗೆ ಕೋವಿಡ್‌–19 ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘ (ಪ್ರೆಸ್‌ ಕ್ಲಬ್‌) ಕಟ್ಟಡದ ಸುತ್ತಲೂ ಸೀಲ್‌ಡೌನ್‌ ಘೋಷಣೆ ಮಾಡಲಾಗಿದೆ.

ಸ್ಥಳೀಯ ಪತ್ರಕರ್ತರಲ್ಲಿ ಸೋಂಕು ಪತ್ತೆಯಾಗಿದೆ, ಇವರು ಈಚೆಗೆ ಜನ್ಮದಿನ ಆಚರಿಸಿಕೊಂಡಿದ್ದು ಔತಣಕೂಟದಲ್ಲಿ ಹಲವು ಪತ್ರಕರ್ತರು ಪಾಲ್ಗೊಂಡಿದ್ದು. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಜಿಲ್ಲಾ ಪತ್ರಕರ್ತರ ಸಂಘ ಸ್ವಯಂ ಪ್ರೇರಿತವಾಗಿ ಸೀಲ್‌ಡೌನ್‌ ಘೋಷಿಸಿದೆ.

‘10 ದಿನಗಳವರೆಗೆ ಪತ್ರಿಕಾ ಭವನದಲ್ಲಿ ಕಾರ್ಯಕ್ರಮ ಹಾಗೂ ಪತ್ರಿಕಾಗೋಷ್ಠಿ ರದ್ದು ಮಾಡಲಾಗಿದೆ’ ಎಂದು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು