ಫಲಿತಾಂಶ ವೃದ್ಧಿಗೆ ‘ವೇಕಪ್ ಕಾಲ್’
‘ನಸುಕಿನ 5 ಗಂಟೆಗೆ ವಿದ್ಯಾರ್ಥಿಗಳಿಗೆ ‘ವೇಕಪ್ ಕಾಲ್’ ಬೆಳಿಗ್ಗೆ 8.45ಕ್ಕೆ ‘ವಿಶೇಷ ತರಗತಿ’ ಸಂಜೆ 4.30ಕ್ಕೆ ‘ಗ್ರೂಪ್ ಸ್ಟಡಿ’ ಹಾಗೂ ನಿತ್ಯ ಅಭ್ಯಾಸದ ‘ವೇಳಾಪಟ್ಟಿ’ ರಚಿಸಲಾಗಿದೆ. ಮಂಡ್ಯ ಜಿಲ್ಲೆಯು 2024–25ರಲ್ಲಿ 12ನೇ ಸ್ಥಾನವನ್ನು ಗಳಿಸಿದ್ದು ಈ ಬಾರಿ ‘ಟಾಪ್–5’ ಸ್ಥಾನದಲ್ಲಿ ಬರಲು ಶ್ರಮಿಸುತ್ತಿದ್ದೇವೆ’ ಎಂದು ಮಂಡ್ಯ ಡಿಡಿಪಿಐ ಲೋಕೇಶ್ ಜಿ.ಎ. ತಿಳಿಸಿದರು. ಇಲಾಖೆಯ ವೆಬ್‌ಸೈಟ್‌ನಲ್ಲಿ ‘ಸ್ಟೂಡೆಂಟ್ ಕಾರ್ನರ್’ ರಚಿಸಿ ವಿಷಯವಾರು ಪ್ರಶ್ನೆಪತ್ರಿಕೆ ಸಮಗ್ರ ಪ್ರಶ್ನೆಗಳ ಬ್ಯಾಂಕ್ ಶೇ 100 ಅಂಕ ಪಡೆದಿರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪ್ರಕಟಿಸಲಾಗಿದ್ದು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.