ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಇಬ್ಬರಿಗೆ ಅಂತಾರಾಷ್ಟ್ರೀಯ ರೇಟಿಂಗ್

Published 9 ಫೆಬ್ರುವರಿ 2024, 13:42 IST
Last Updated 9 ಫೆಬ್ರುವರಿ 2024, 13:42 IST
ಅಕ್ಷರ ಗಾತ್ರ

ಮಂಡ್ಯ: ‘ಮಂಡ್ಯ ಚೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಮಿಲನ್ ಎಸ್.ಗೌಡ ಹಾಗೂ ಎಂ.ಭಾನುಪ್ರಸಾದ್ ಅವರಿಗೆ ಅಂತರ ರಾಷ್ಟ್ರೀಯ ಚೆಸ್ ಸಂಸ್ಥೆ(ಫಿಡೆ) ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಅಂತರರಾಷ್ಟ್ರೀಯ ರೇಟಿಂಗ್ ದೊರೆತಿದೆ’ ಎಂದು ಚೆಸ್‌ ತರಬೇತುದಾರರಾದ ಮಾಧುರಿ ಜೈನ್ ಹೇಳಿದರು.

‘ಫೆ.1 ರಂದು ಅಂತರ ರಾಷ್ಟ್ರೀಯ ಚೆಸ್ ಸಂಸ್ಥೆ(ಫಿಡೆ) ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ 12 ವರ್ಷದ ಮಿಲನ್ ಎಸ್.ಗೌಡ 1059 , 11 ವರ್ಷದ ಭಾನುಪ್ರಸಾದ್ ಎಂ ಮಿಂಚಿನ ರೇಟಿಂಗ್ 1144 ರ‍್ಯಾಂಕಿಂಗ್‌ ದೊರತಿದೆ. ಇವರಿಬ್ಬರಿಗೂ ಜ.22ರಂದು ನಡೆಯುವಮ ಅಂತರ ರಾಷ್ಟ್ರೀಯ ಮಿಂಚಿನ ಹಾಗೂ 23 ರಿಂದ 26 ರವರೆಗೆ ಬೆಂಗಳೂರಿನಲ್ಲಿ ನಡೆದ ಮೊದಲ ಅಂತರ ರಾಷ್ಟ್ರೀಯ ಗ್ರಾಂಡ್ ಮಾಸ್ಟರ್ ಪಂದ್ಯಾವಳಿಯಲ್ಲಿ ರೇಟಿಂಗ್ ಗಳಿಸಿದ್ದಾರೆ ’ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

‘ವಿವಿಧ ದೇಶಗಳಿಂದ ಸುಮಾರು 700 ಸ್ಪರ್ಧಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಇದರೊಂದಿಗೆ ಮಂಡ್ಯ ಚೆಸ್ ಅಕಾಡೆಮಿಯಲ್ಲಿ 88 ರಂದು ಅಂತರರಾಷ್ಟ್ರೀಯ ರ‍್ಯಾಂಕಿಂಗ್‌ ಪಡೆದಿದ್ದಾರೆ. ಮಂಡ್ಯದಲ್ಲಿ ಅಂತರರಾಷ್ಟ್ರೀಯ ಪಂದ್ಯಾವಳಿ ನಡೆಸುವ ಚಿಂತನೆ ಇದೆ. ವಿವಿಧ ದೇಶಗಳ ಗ್ರ್ಯಾಂಡ್‌ ಮಾಸ್ಟರ್‌ಗಳು ಸೇರಿದಂತೆ 1500 ಕ್ರೀಡಾಪಟುಗಳು ಏಕಕಾಲದಲ್ಲಿ ಭಾಗವಹಿಸುವ ವ್ಯವಸ್ಥೆ ಕಲ್ಪಿಸುವ ಚಿಂತನೆ ಇದೆ’ ಎಂದರು. ಮಿಲನ್ ಎಸ್.ಗೌಡ, ಎಂ.ಭಾನುಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT