ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Vegetable Market| ಶುಂಠಿ, ಬೀನ್ಸ್‌ ದುಬಾರಿ, ಟೊಮೆಟೊ ಅಗ್ಗ

ಸಬ್ಬಸಿಗೆ, ಮೆಂತೆ ಸೊಪ್ಪು ಬೆಲೆ ತೀವ್ರ ಏರಿಕೆ, ಹಣ್ಣುಗಳ ದರ ಸ್ಥಿರ
Published 23 ಮೇ 2023, 15:42 IST
Last Updated 23 ಮೇ 2023, 15:42 IST
ಅಕ್ಷರ ಗಾತ್ರ

ಮಂಡ್ಯ: ಹಸಿ ಶುಂಠಿ ಬೆಲೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು ಪ್ರತಿ ಕೆ.ಜಿ  ₹ 200ರಂತೆ ಮಾರಾಟವಾಗುತ್ತಿದೆ. ಬೀನ್ಸ್‌ ಬೆಲೆ ಕೊಂಚ ಇಳಿಕೆಯಾಗಿದ್ದರೂ ₹ 100 ಗಡಿಯಲ್ಲೇ ಇದ್ದು ಗ್ರಾಹಕರಿಗೆ ಹೊರೆಯಾಗಿದೆ. ಟೊಮೆಟೊ ಬೆಲೆ ಕಡಿಮೆಯಾಗಿದೆ.

ಶುಂಠಿ ಬೆಲೆ ಕಳೆದ ವಾರ ₹ 160ರಂತೆ ಮಾರಾಟವಾಗುತ್ತಿತ್ತು. ಈಗ ಪೂರೈಕೆ ಕಡಿಮೆಯಾಗಿದ್ದು ಬೆಲೆ ಮತ್ತಷ್ಟು ಏರಿಕೆ ಕಂಡಿದೆ. ಬೆಲೆ ಏರಿಕೆ ಕಾರಣದಿಂದಾಗಿ ಸಣ್ಣ ಪುಟ್ಟ ಅಂಗಡಿಗಳಲ್ಲಿ ಶುಂಠಿ ಮಾರಾಟವನ್ನೇ ನಿಲ್ಲಿಸಲಾಗಿದೆ. ಬಿರು ಬಿಸಿಲಿನ ಕಾರಣದಿಂದಾಗಿ ಶುಂಠಿ ಬೆಲೆಯಲ್ಲಿ ತೀವ್ರವಾಗಿ ಏರಿಕೆ ಕಂಡಿದೆ. ಬೀನ್ಸ್‌ ಕಳೆದ ವಾರ ₹ 120ಕ್ಕೆ ಮಾರಾಟವಾಗುತ್ತಿತ್ತು. ಈ ವಾರ ಕೊಂಚ ಕಡಿಮೆಯಾಗಿದ್ದು ₹ 100ರಂತೆ ಮಾರಾಟವಾಗುತ್ತಿದೆ.

ಬೀನ್ಸ್‌ ಜೊತೆಗೆ ಸೊಪ್ಪುಗಳ ಬೆಲೆಯೂ ಏರಿಕೆಯಾಗಿದೆ. ಪ್ರತಿ ಕಟ್ಟು ನಾಟಿ ಕೊತ್ತಂಬರಿ ₹ 30ಕ್ಕೆ ಮಾರಾಟವಾಗುತ್ತಿದೆ. ಮೆಂತೆ ಸೊಪ್ಪಿನ ಬೆಲೆ ತೀವ್ರ ಹೆಚ್ಚಾಗಿದ್ದು ಪ್ರತಿ ಕಟ್ಟಿಗೆ ₹ 60ರಂತೆ ಮಾರಾಟವಾಗುತ್ತಿದೆ. ನುಗ್ಗೆಕಾಯಿ ಬೆಲೆಯೂ ಏರಿಕೆಯಾಗಿದ್ದು ಪ್ರತಿ ಕೆ.ಜಿ ₹ 80ಕ್ಕೆ ಮಾರಾಟವಾಗುತ್ತಿದೆ.

ಉಳಿದಂತೆ ಟೊಮೆಟೊ ₹10, ಸಹಿಗುಂಬಳ, ಸೋರೆಕಾಯಿ, ಮೂಲಂಗಿ, ಎಲೆಕೋಸು ₹20, ಈರೇಕಾಯಿ, ಬೆಂಡೆಕಾಯಿ, ಸಿಹಿಗೆಣಸು, ಆಲೂಗೆಡ್ಡೆ, ಈರುಳ್ಳಿ ₹30, ಬೀಟ್‌ರೂಟ್‌ ₹40, ಹೂಕೋಸು ₹50, ಭಜಿಮೆಣಸಿನಕಾಯಿ, ಹಸಿರುಮೆಣಸಿನಕಾಯಿ, ಬದನೆಕಾಯಿ, ಸುವರ್ಣಗೆಡ್ಡೆ, ತೊಂಡೆಕಾಯಿ, ಗೋರಿಕಾಯಿ, ದಪ್ಪಮೆಣಸಿನಕಾಯಿ, ಕ್ಯಾರೆಟ್ ₹60ರಂತೆ ಮಾರಾಟವಾಗುತ್ತಿವೆ.

ಫಾರಂ ಬೀನ್ಸ್‌ ₹80, ನಾಟಿ ಬೀನ್ಸ್‌ ₹100, ಹಸಿಬಟಾಣಿ ₹120, ರಾಜ್‌ಈರುಳ್ಳಿ ₹160, ನಾಟಿಬೆಳ್ಳುಳ್ಳಿ, ಶುಂಠಿ ₹200ರಂತೆ ಪ್ರತಿ ಕೆ.ಜಿಗೆ ಮಾರಾಟವಾಗುತ್ತಿವೆ. ಒಂದು ನಿಂಬೆಹಣ್ಣಿಗೆ ₹6ರಂತೆ ಮಾರಾಟ ಮಾಡಲಾಗುತ್ತಿದೆ.

ಹಣ್ಣುಗಳಲ್ಲಿ ಸೇಬು ₹200, ಕಿವಿಹಣ್ಣು(ಬಾಕ್ಸ್‌), ಕಲ್ಲಂಗಡಿ ₹25, ಪಚ್ಚಬಾಳೆ, ಪಪ್ಪಾಯ ₹30, ಅನಾನಸ್‌, ಕರಬೂಜ ₹40, ಏಲಕ್ಕಿಬಾಳೆ ₹50, ಸೀಬೆ ₹60, ಮೂಸಂಬಿ, ಸಪೋಟ ₹80, ಕಂದ್ರಾಕ್ಷಿ ₹120, ಕಿತ್ತಳೆ, ದಪ್ಪದ್ರಾಕ್ಷಿ ₹140, ಕಪ್ಪುದ್ರಾಕ್ಷಿ, ದಾಳಿಂಬೆ ₹160ರಂತೆ ಮಾರಾಟವಾಗುತ್ತಿವೆ.

ಸೊಪ್ಪುಗಳಲ್ಲಿ ಸಬ್ಬಸಿಗೆ, ಮೆಂತೆ, ನಾಟಿ ಕೊತ್ತಂಬರಿ ಸೊಪ್ಪಿನ ಬೆಲೆ ದುಬಾರಿಯಾಗಿದೆ. ಉಳಿದಂತೆ ಕೀರೆ ₹5, ದಂಟು, ಪುದಿನಾ, ಕರಿಬೇವು ₹10, ಕಿಲ್‌ಕೀರೆ ₹15, ನಾಟಿ ಕೊತ್ತಂಬರಿ ₹ 20, ಚಿಕ್ಕಿಸೊಪ್ಪು ₹30ರಂತೆ ಮಾರಾಟವಾಗುತ್ತಿವೆ.

ಹೂವುಗಳಲ್ಲಿ ಕನಕಾಂಬರ, ಮಲ್ಲಿಗೆ, ಕಾಕಡ ದುಬಾರಿ ಆಗಿದೆ. ಕೆಜಿ ಕೆಂಪು ಚೆಂಡು ಹೂ ₹ 100, ಹಳದಿ ಚೆಂಡುವೂ ₹ 120, ಸುಗಂಧ ರಾಜ ₹100, ಸಣ್ಣಗುಲಾಬಿ, ಕಲ್ಕತ್ತಾ ಮಲ್ಲಿಗೆ ₹150, ಗಣಗಲೆ ₹180, ಬಿಳಿ ಸೇವಂತಿ, ಬಟನ್ಸ್‌ ₹250, ಸೇವಂತಿಗೆ, ಮರಳೆ ₹500, ಕಾಕಡ ₹600, ಮಲ್ಲಿಗೆ ₹650, ಕನಕಾಂಬರ ₹800ರಂತೆ ಮಾರಾಟವಾಗುತ್ತಿವೆ.

ಮಾರು ತುಳಸಿ ₹30, ಕೆಂಪು ಚೆಂಡುಹೂ ₹30, ಹಳದಿ ಚೆಂಡು ಹೂ ₹40, ಕಾಕಡ, ಮರಳೆ ₹50, ಕನಕಾಂಬರ ₹60, ಬಟನ್ಸ್‌ ₹70, ಸೇವಂತಿಗೆ ₹80, ಬಿಳಿ ಸೇವಂತಿಗೆ ₹100, ಮಲ್ಲಿಗೆ ₹100ರಂತೆ ಮಾರಾಟವಾಗುತ್ತಿವೆ.

ತರಕಾರಿ, ಹಣ್ಣು ದರ ಪಟ್ಟಿ (₹ ಪ್ರತಿ ಕೆ.ಜಿ)

  • ನಾಟಿ ಬೀನ್ಸ್‌; 100

  • ನುಗ್ಗೇಕಾಯಿ; 80

  • ಹಸಿರು ಮೆಣಸಿನಕಾಯಿ; 60

  • ಕ್ಯಾರೆಟ್‌; 60

  • ಬೀಟರೂಟ್‌: 60

  • ಗೆಡ್ಡೆಕೋಸು; 80

  • ಟೊಮೆಟೊ; 10

  • ರಾಜ್‌ ಈರುಳ್ಳಿ; 160

  • ನಾಟಿ ಬೆಳ್ಳುಳ್ಳಿ; 160

  • ಸೇಬು; 200

  • ಕಪ್ಪು ದ್ರಾಕ್ಷಿ; 160

  • ಸಪೋಟ;80

  • ಕಿತ್ತಳೆ; 140

  • ಪಚ್ಚಬಾಳೆ; 30

  • ಏಲಕ್ಕಿಬಾಳೆ; ₹50

  • ದಾಳಿಂಬೆ; 160

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT