ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಲುಕೋಟೆ | ನಾಪತ್ತೆಯಾಗಿದ್ದ ವೃದ್ಧನ ಶವ ಕೆರೆಯಲ್ಲಿ ಪತ್ತೆ

Published 25 ಜೂನ್ 2024, 14:37 IST
Last Updated 25 ಜೂನ್ 2024, 14:37 IST
ಅಕ್ಷರ ಗಾತ್ರ

ಮೇಲುಕೋಟೆ: ಬೆಂಗಳೂರಿನಿಂದ ಊರಿಗೆ ಬಂದು ನಾಪತ್ತೆಯಾಗಿದ್ದ ವೃದ್ಧರೊಬ್ಬರ ಶವ ಇಲ್ಲಿನ‌ ದಳವಾಯಿ ಕೆರೆಯಲ್ಲಿ ಪತ್ತೆಯಾಗಿದೆ.

ಮೃತರನ್ನು ಬೆಂಗಳೂರಿನ ಬನ್ನೇರಘಟ್ಟ ನಿವಾಸಿ ರಂಗಸ್ವಾಮಿ (58)  ಎಂದು ಗುರುತಿಸಲಾಗಿದೆ. ತಂದೆ– ತಾಯಿ ಹುಟ್ಟೂರಾದ ಮೇಲುಕೋಟೆಗೆ  ಮೂರು ದಿನದ ಹಿಂದೆ ಬಂದಿದ್ದರು. ಆದರೆ, ಅತ್ತ ಬೆಂಗಳೂರಿಗೂ ಹೋಗದೆ ಇಲ್ಲಿನ ಸಂಬಂಧಿಕರ ಮನೆಗೂ ಬಾರದೆ ಕಾಣೆಯಾಗಿದ್ದರು.

ಈ ಕುರಿತು ಅವರ ಮಗ ಮಿಥುನ್ ರಾಜ್ ಮೇಲುಕೋಟೆ ಠಾಣೆಯಲ್ಲಿ ತಂದೆ ಕಾಣೆಯಾಗಿದ್ದಾರೆ ಎಂದು ಪ್ರಕರಣ‌ ದಾಖಲಿಸಿದರು.

ಇಲ್ಲಿನ ಪ್ರಸಿದ್ಧ ದಳವಾಯಿ ‌ಕೆರೆಯ ಮಂಟಪದ ಬಳಿ ಈ ವ್ಯಕ್ತಿಯ ಬಟ್ಟೆ ಚಪ್ಪಲಿ ಪತ್ತೆಯಾಗಿದ್ದರಿಂದ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು‌ ಶಂಕಿಸಿ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿದಾಗ ಬಳಿಕ ಕೆರೆಯಲ್ಲಿ ಶವ ಪತ್ತೆಯಾಗಿದೆ.

ಈ ಸಂಬಂಧ ಮೇಲುಕೋಟೆ ಠಾಣೆಯಲ್ಲಿ‌ ಆತ್ಮಹತ್ಯೆ ಪ್ರಕರಣ‌ ದಾಖಲಾಗಿದೆ.

ಮೇಲುಕೋಟೆ ದಳವಾಯಿ ಕೆರೆಯಲ್ಲಿ ಶವ ಪತ್ತೆಗೆ ಅಗ್ನಿಶಾಮಕ ದಳದವರು ಹುಡುಕಾಟ ನಡೆಸಿದರು
ಮೇಲುಕೋಟೆ ದಳವಾಯಿ ಕೆರೆಯಲ್ಲಿ ಶವ ಪತ್ತೆಗೆ ಅಗ್ನಿಶಾಮಕ ದಳದವರು ಹುಡುಕಾಟ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT