ಮಂಡ್ಯ: ‘ಕಾವೇರಿ ಆರತಿ’ಯನ್ನು ವಿರೋಧಿಸುತ್ತಿರುವ ಬಿಜೆಪಿಯವರಿಗೆ ಆ ತಾಯಿಯ ಶಾಪ ತಟ್ಟುತ್ತದೆ. ಒಂದು ಕಡೆ ಗಂಗಾರತಿಯನ್ನು ಒಪ್ಪುವವರು ಕಾವೇರಿ ಆರತಿಯನ್ನು ವಿರೋಧಿಸುತ್ತಿರುವುದಾದರೂ ಏಕೆ ಎಂದು ಶಾಸಕ ಪಿ.ರವಿಕುಮಾರ್ ಪ್ರಶ್ನಿಸಿದರು.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕಾವೇರಿ ತಾಯಿ ಮೂರು ರಾಜ್ಯದವರಿಗೆ ಊಟ ಕೊಡುತ್ತಾಳೆ. ಭಜರಂಗದಳದವರೇ ಕಾವೇರಿ ಆರತಿಯನ್ನು ನಡೆಸುವಂತೆ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಮಾತೆಗೆ ಆರತಿ ಮಾಡುವುದು ಹಿಂದೂ ಧರ್ಮದ ಸಂಪ್ರದಾಯ. ಇದಕ್ಕೆ ವಿರೋಧಿಸಿದರೆ ಕಾವೇರಿ ತಾಯಿಯ ಶಾಪ ತಟ್ಟುತ್ತದೆ’ ಎಂದು ಎಚ್ಚರಿಸಿದರು.

‘ಸ್ಲಂ ಬೋರ್ಡ್ ಮನೆಗಳಿಗೆ ಮುಸ್ಲಿಮರ ಪ್ರವೇಶದ ಹಿಂದೆ ಶಾಸಕರ ಕೈವಾಡವಿದೆ’ ಎಂದು ಆರೋಪಿಸಿರುವ ಆರ್.ಅಶೋಕ್ ಅವರು ತಮ್ಮ ಬುದ್ಧಿಯನ್ನು ಸೀಮಿತವಾಗಿಟ್ಟುಕೊಳ್ಳಲಿ. ತಾನು ಏನು ಎಂಬುದನ್ನು ಅವರು ಮೊದಲು ತಿಳಿದುಕೊಳ್ಳಲಿ. ಮುಸ್ಲಿಮರು ಪ್ಯಾಲಸ್ತೇನ್ನಲ್ಲಿ ಇಲ್ಲ, ಭಾರತದಲ್ಲೇ ಅವರು ಇರೋದು ಎಂಬುದನ್ನು ಅರ್ಥಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ತಮಿಳು ಕಾಲನಿಯವರು ಈಗ ತಾವಿರುವ ಸ್ಥಳದಲ್ಲೇ ಇರುತ್ತೇವೆ. ಮನೆ ಬೇಡ ಎನ್ನುತ್ತಿದ್ದಾರೆ. ಕೋರ್ಟ್ ಆದೇಶ ನೀಡಿದರೆ ಎಲ್ಲ ಧರ್ಮದ ಅರ್ಹರಿಗೆ ಮನೆ ಹಂಚುತ್ತೇವೆ. ಮನೆ ಸಿಗುವ ಆಸೆಯಿಂದ ಕೆಲವರು ಅಲ್ಲಿಗೆ ಹೋಗಿರಬಹುದು ಎಂದು ಸ್ಪಷ್ಟೀಕರಣ ನೀಡಿದರು.

‘ಕುಮಾರಸ್ವಾಮಿ ಅವರು ಸರ್ಕಲ್ಗೆ ಬರಲಿ ಏನೇನು ಮಾಡಿದ್ದೇವೆ ಎಂದು ತೋರಿಸುತ್ತೇವೆ. ಎಲ್ಲೆಲ್ಲಿ ಗುಡ್ಡೆ ಹಾಕಬೇಕಿತ್ತೋ ಅಲ್ಲಿ ಹಾಕಿದ್ದೇವೆ. ಬಂದು ಕುಮಾರಸ್ವಾಮಿ ಎಣಿಸಿಕೊಂಡು ಹೋಗಲಿ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.