ಸಂತೇಬಾಚಹಳ್ಳಿ:ಹೋಬಳಿಯ ಸಾರಂಗಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಬಳಿ 11 ದಿನದ ಹಿಂದೆ ಮೃತಪಟ್ಟ ಕೋತಿಗೆ ಗ್ರಾಮಸ್ಥರು ಉತ್ತರ ಕ್ರಿಯಾದಿ ನಡೆಸಿದರು.
ದೇವಸ್ಥಾನದ ಬಳಿ ಇದ್ದ ಕೋತಿ ಯನ್ನು ಗ್ರಾಮಸ್ಥರು ಹನುಮಂತನ ಪ್ರತಿರೂಪ ಎಂದು ಭಾವಿಸಿ ಹಿಂದೂ ಸಂಪ್ರದಾಯದಂತೆ ಪೂಜೆಯನ್ನು ಸಲ್ಲಿಸಿ ಮಣ್ಣುಮಾಡಿದ್ದರು. ಅಲ್ಲದೇ ಹನ್ನೊಂದನೇ ದಿನದ ಉತ್ತರ ಕ್ರೀಯಾದಿ ಭೂ ಶಾಂತಿ ಕಾರ್ಯವನ್ನು ಗ್ರಾಮಸ್ಥರುಗಳು ಸಾರಂಗಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ನಡೆಸಿದರು.
ಈಗ ತಿಥಿಯನ್ನು ಸರಳವಾಗಿ ಮಾಡಿದ್ದು ಲಾಕ್‌ಡೌನ್ ಸಡಿಲಗೊಂಡ ಬಳಿಕ ಅದ್ಧೂರಿಯಾಗಿ ಮಾಡುತ್ತೇವೆ ಎಂದು ಗ್ರಾಮದ ಮುಖಂಡ ನಿಂಗರಾಜು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.