‘13 ಸಾವಿರ ಪ್ರಕರಣ ಇತ್ಯರ್ಥ’
‘ಮನೆ– ಮನೆಗೆ ತೆರಳಿ ಖಾತೆ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಆದೇಶ ಹೊರಡಿಸಿದ್ದಾರೆ. ಹಲವಾರು ದಿನಗಳಿಂದ ಬಾಕಿ ಇದ್ದಂತಹ ಒಟ್ಟು 15 ಸಾವಿರ ಪ್ರಕರಣಗಳಲ್ಲಿ 13 ಸಾವಿರ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಒಂದು ವಾರದಲ್ಲಿಯೇ 416 ಪ್ರಕರಣಗಳ ಸರ್ವೆ ಮಾಡಲಾಗಿದೆ. ಜೊತೆಗೆ ಪೌತಿ ಖಾತೆಗಳನ್ನು ಸರಿಯಾದ ರೀತಿಯಲ್ಲಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಹಂತ– ಹಂತವಾಗಿ ಪರಿಹರಿಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದರು.