ಪಟ್ಟಣದ ಬಿಂಡಿಗನವಿಲೆ ರಸ್ತೆಯಲ್ಲಿರುವ ಕೃಷ್ಣಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಬೆಳಿಗ್ಗೆ ಜರುಗಿದ ಶಾಂತಿ ಸಭೆಯ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಶಾಂತಿ ಸಭೆಯಲ್ಲಿ ಹಿಂದೂ ಮುಸ್ಲಿಮರು ಅಣ್ಣ ತಮ್ಮರಂತೆ ಕುಳಿತಿದ್ದರು. ಗಣೇಶ ಉತ್ಸವ, ಮುಸ್ಲಿಂ ಹಬ್ಬಗಳಿಗೂ ಪರಸ್ಪರ ಸಹಕಾರವನ್ನು ಪಡೆಯುತ್ತೇವೆ ಎಂದು ಎರಡು ಸಮುದಾಯಗಳ ಹಿರಿಯರು ಹೇಳಿದ್ದಾರೆ. ಗಲಭೆಯಿಂದ ಹಾನಿಗೊಳಗಾದವರಿಗೆ ಪರಿಹಾರ, ಬಂಧಿತ ಅಮಾಯಕರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಅಗತ್ಯ ಕ್ರಮವಹಿಸುತ್ತೇತೆ ಎಂದರು.