ಮಂಗಳವಾರ, ಅಕ್ಟೋಬರ್ 27, 2020
28 °C

ರಾಷ್ಟ್ರೀಯ ಸ್ಪರ್ಧೆ: ಆವಿಷ್ಕಾರಗಳ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ನ್ಯಾಷನಲ್ ಇನೋವೇಷನ್ ಫೌಂಡೇಶನ್ ವತಿಯಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಸಾಮಾನ್ಯ ಜನರ ಸಂಶೋಧನೆ ಹಾಗೂ ಸಾಂಪ್ರದಾಯಿಕ ಜ್ಞಾನಕ್ಕಾಗಿ ನಡೆಸುವ 12ನೇ ರಾಷ್ಟ್ರೀಯ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.

ಗ್ರಾಮೀಣ ಮತ್ತು ನಗರ ಪ್ರದೇಶದ ರೈತರು ಕುಶಲಕರ್ಮಿಗಳು, ಮೆಕ್ಯಾನಿಕ್ ಗಳು, ಕೊಳೆಗೇರಿ ನಿವಾಸಿಗಳು, ಮೀನುಗಾರಿಕೆ ಸಂಬಂಧಿತ ಉದ್ಯೋಗದಲ್ಲಿ ತೊಡಗಿರುವವರು ತಮ್ಮ ಆವಿಷ್ಕಾರ, ಅನ್ವೇಷಣೆಗೆ ಸಂಬಂಧಿಸಿದ ಸಂಶೋಧನೆ ಕುರಿತು ಮಾಹಿತಿಯೊಂದಿಗೆ ಈ ವರ್ಷಾಂತ್ಯದೊಳಗೆ ಅರ್ಜಿ ಸಲ್ಲಿಸಬಹುದು.

ಸೃಜನಶೀಲತೆಯಿಂದ ಸಂಶೋಧನೆ ಮಾಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಸ್ಪರ್ಧೆ ನಡೆಯಲಿದೆ. ಕೃಷಿ ಹಾಗೂ ಕೃಷಿಯೇತರ ಕ್ಷೇತ್ರದಲ್ಲಿ ಉಪಯುಕ್ತವಾಗುವ ಉಪಕರಣಗಳು,  ಮಾನವ ಶಕ್ತಿ ಕಡಿಮೆ ಮಾಡುವಂತಹ ಯಂತ್ರಗಳು, ಸಸ್ಯ ಪ್ರಬೇಧಗಳ ಸಂರಕ್ಷಣೆಗೆ ಸಂಬಂಧಿಸಿದ ಸಂಶೋಧನೆ ಮಾಡಿದವರು ಅರ್ಜಿ ಸಲ್ಲಿಸಬಹುದು.

ವಿವಿಧ ವಿಭಾಗಗಳಲ್ಲಿ ₹10 ಸಾವಿರದಿಂದ, ₹7.5 ಲಕ್ಷದವರೆಗೆ ಬಹುಮಾನ ವಿತರಣೆ ಮಾಡಲಾಗುವುದು. ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದವರಿಗೆ ಮಾಸಿಕ ಫೆಲೋಶಿಪ್‌, ಜೀವಮಾನದ ಸಾಧನೆ ಪ್ರಶಸ್ತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗೆ ಮೊ; 9986863337 ಸಂಪರ್ಕಿಸಬಹುದು. ಅರ್ಜಿಗಳನ್ನು ಎನ್ಐಎಫ್ ಕೋಆರ್ಡಿನೇಟರ್, ಸೆಂಟ್ ಥಾಮಸ್ ಮಿಷನ್ ಸೊಸೈಟಿ ಸಾಂಥೋಮ್, ಪಿ.ಬಿ.ನಂ.42, ಪಿಇಎಸ್ ಎಂಜಿನಿಯರಿಂಗ್ ಕಾಲೇಜು ರಸ್ತೆ, ಮಂಡ್ಯ ಇಲ್ಲಿಗೆ ಅರ್ಜಿ ಕಳುಹಿಸಲು ಪ್ರಕಟಣೆ ಕೋರಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.