ಗುರುವಾರ , ಏಪ್ರಿಲ್ 15, 2021
22 °C

ಪಿ.ಹೊಸಹಳ್ಳಿ ಸರ್ಕಾರಿ ಶಾಲೆ: ಅಧಿಕಾರಿಗಳ ವಾಸ್ತವ್ಯ, ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಪಿ.ಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು ಅವರು ಸಹ ಅಧಿಕಾರಿಗಳ ಜತೆಗೆ ಗುರುವಾರ ಶಾಲಾ ವಾಸ್ತವ್ಯ‌ ನಡೆಸಿದರು.

ಸಂಜೆ ಆರು ಗಂಟೆಗೆ ಶಾಲೆಗೆ ಬಂದ ಅಧಿಕಾರಿಗಳ ತಂಡ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿತು.

ವಿದ್ಯಾರ್ಥಿ ಪೋಷಕರು ಮತ್ತು ಶಾಲೆಯ ಶಿಕ್ಷಕರ ಜತೆಗೂ ಚರ್ಚೆ ನಡೆಯಿತು. ಶಾಲೆಯ ಪಡಸಾಲೆಯಲ್ಲಿ ಕುಳಿತು ಫಲಿತಾಂಶ ಉತ್ತಮಪಡಿಸುವಂತೆ‌ ಮಾರ್ಗದರ್ಶನ ಮಾಡಿದರು.

ಬಿಇಒ ಅನಂತರಾಜು ಅವರ‌ ಜತೆಗೆ ಶಿಕ್ಷಣ ಸಂಯೋಜಕಿ ಡಾ.ಬಿ.ಆರ್.ಪ್ರತಿಮಾ, ರಾಮಚಂದ್ರ, ಮಂಚೇಗೌಡ ಅವರು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.

ಮುಖ್ಯ ಶಿಕ್ಷಕ ಕೃಷ್ಣೇಗೌಡ, ಸಹ ಶಿಕ್ಷಕರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು