ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಪದಕ ಗೆದ್ದ ಪಿಇಟಿ ಈಜು ಪಟುಗಳು

ಪಿಇಟಿ ಈಜು ಕೇಂದ್ರದ ವಿದ್ಯಾರ್ಥಿಗಳಿಗೆ ಬಹುಮಾನ
Published 8 ಜೂನ್ 2024, 13:45 IST
Last Updated 8 ಜೂನ್ 2024, 13:45 IST
ಅಕ್ಷರ ಗಾತ್ರ

ಮಂಡ್ಯ: ಬೆಂಗಳೂರಿನ ದ್ರಾವಿಡ ಪಡುಕೋಣೆ ಸೆಂಟರ್ ಆಫ್ ಸ್ಪೋರ್ಟ್ಸ್ ಕೇಂದ್ರದಲ್ಲಿ ಕರ್ನಾಟಕ ಈಜು ಸಂಸ್ಥೆ ಈಚೆಗೆ ನಡೆಸಿದ ರಾಜ್ಯ ಮಟ್ಟದ ಜೂನಿಯರ್ ಹಾಗೂ ಸಬ್ ಜೂನಿಯರ್ ಈಜು ಸ್ಪರ್ಧೆಯಲ್ಲಿ ನಗರದ ಪಿ.ಇ.ಟಿ. ಈಜು ಕೇಂದ್ರದ ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಪದಕ ಗೆದ್ದುಕೊಂಡಿದ್ದಾರೆ.

ಸಬ್ ಜೂನಿಯರ್ ವಿಭಾಗದಲ್ಲಿ ಪಿಇಟಿ ಈಜು ಕೇಂದ್ರದ ಈಜು ಪಟುಗಳಾದ 200 ಮೀಟರ್ ಬ್ಯಾಂಕ್ ಸ್ಟ್ರೋಕ್‌ನಲ್ಲಿ ಎಂ.ಎನ್‌.ಯತಿನ್ (ಬೆಳ್ಳಿ ಪದಕ) ಹಾಗೂ 200 ಮೀಟರ್ ಬಟರ್ ಪ್ಲೈನಲ್ಲಿ ಕಂಚಿನ ಪದಕ, 50 ಮೀಟರ್ ಬೆಸ್ಟ್ ಸ್ಟ್ರೋಕ್‌ನಲ್ಲಿ ಕಂಚಿನ ಪದಕ ಹಾಗೂ 200 ಮೀಟರ್ ಬೆಸ್ಟ್ ಸ್ಟ್ರೋಕ್‌ನಲ್ಲಿ ಕಂಚಿನ ಪದಕವನ್ನು ಕುಸಲ್ ಬಿ ಗೌಡ ಮತ್ತು ಎಂ.ಸಮರ್ಥ್ ಪಡೆದಿದ್ದಾರೆ.

ಪಿ.ಇ.ಟಿ ಈಜು ಕೇಂದ್ರದ ಆಡಳಿತಾಧಿಕಾರಿ ಚಂದ್ರಶೇಖರ್, ತರಬೇತುದಾರ ಸಿ.ಎಂ.ಗಿರೀಶ್ ಕುಮಾರ್  ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT