ಮಂಡ್ಯ: ‘ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರು ಕಾವೇರಿ ಹೋರಾಟಗಾರ ಜಿ. ಮಾದೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಚಲನಚಿತ್ರ ನಟ ಅಂಬರೀಷ್ ಅವರು ಸೇರಿದಂತೆ ಹಲವು ನಾಯಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಇದನ್ನು ವಿರೋಧಿಸಿ ಅವರ ನಿವಾಸದ ಎದುರು ಬೆಂಗಳೂರಿನಲ್ಲಿ ಜ.30ರಂದು ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದು ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಲು ಅಂಬರೀಷ್ ಕಾಲುಕಟ್ಟಿಕೊಂಡ ದಿನಗಳನ್ನು ಶಿವರಾಮೇಗೌಡ ಅವರು ಮರೆತಿದ್ದಾರೆ. ಅವರ ಹೆಸರು ಹೇಳಿಕೊಂಡೇ ಅಧಿಕಾರ, ಹಣ ಮಾಡಿಕೊಂಡು ಈಗ ಅಂಬರೀಷ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ಬಿಡಬೇಕು. ರೈತಪರ ಹೋರಾಟಗಾರರಾದ ಜಿ.ಮಾದೇಗೌಡ ಅವರ ಬಗ್ಗೆಯೂ ಲಘುವಾಗಿ ಮಾತನಾಡಿರುವ ಇವರ ವಿರುದ್ಧ ಮಂಡ್ಯ ಮತ್ತು ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡುತ್ತಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ತಕ್ಷಣ ಕ್ಷಮೆ ಕೇಳದಿದ್ದರೆ ಹಾಗೂ ಪೊಲೀಸರು ಕ್ರಮ ವಹಿಸದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

‘ಮಾತನಾಡಿರುವುದು ನಾನಲ್ಲ’ ‘

ನಾಗಮಂಗಲದ ಜೆಡಿಎಸ್ ಕಾರ್ಯಕರ್ತನ ಜೊತೆ ನಾನು ಮಾತನಾಡಿದ್ದೇ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಆಡಿಯೊದಲ್ಲಿರುವ ಮಾತುಗಳು ಸತ್ಯಕ್ಕೆ ದೂರವಾದವು. ಅದಲ್ಲಿರುವ ಬಹುತೇಕ ಮಾತುಗಳನ್ನು ನಾನು ಹೇಳಿಲ್ಲ. ಬೇಕಾದ ರೀತಿಯಲ್ಲಿ ತಿರುಚಿ ಆಡಿಯೊ ಹರಿಬಿಡಲಾಗಿದೆ. ಇದು ಯಾರೋ ಪಿತೂರಿ ಮಾಡಿದ್ದಾರೆ ಇದರ ವಿರುದ್ಧ ಕಾನೂನು ಹೋರಾಟ ನಡೆಸುವೆ’ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಪ್ರತಿಕ್ರಿಯಿಸಿದ್ದಾರೆ.